ಕರ್ನಾಟಕ

karnataka

ETV Bharat / state

ಶಿವಮೊಗ್ಗ ನಗರದ 4 ರೈಲ್ವೆ ಬ್ರಿಡ್ಜ್​ಗಳ ಶಂಕುಸ್ಥಾಪನೆ ನೆರವೇರಿಸಿದ ಸಚಿವ ಪಿಯೂಷ್ ಗೋಯಲ್​​

3 ರೈಲ್ವೆ ಮೇಲ್ಸೇತುವೆಗೆ ಇಂದು ಅಡಿಪಾಯ ಹಾಕಿರುವುದು ಸಂತೋಷವಾಗಿದೆ. ನಾವು ಕೆಲಸವನ್ನು ತ್ವರಿತವಾಗಿ ಮುಗಿಸಲು ಯತ್ನಿಸುತ್ತೇವೆ.ಈ ಯೋಜನೆಗಳು ಶಿವಮೊಗ್ಗ ಜನರಿಗೆ ಸೇವೆ ಸಲ್ಲಿಸಲಿವೆ..

ಪಿಯೂಷ್ ಗೋಯಲ್​​
ಪಿಯೂಷ್ ಗೋಯಲ್​​

By

Published : Feb 15, 2021, 5:54 PM IST

Updated : Feb 15, 2021, 7:31 PM IST

ನವದೆಹಲಿ :ಶಿವಮೊಗ್ಗ ನಗರದ 4 ರೈಲ್ವೆ ಬ್ರಿಡ್ಜ್​ಗಳ ಕಾಮಗಾರಿಗೆ ಕೇಂದ್ರ ರೈಲ್ವೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ವರ್ಚುವಲ್ ಮೂಲಕ 110 ಕೋಟಿ ರೂ. ವೆಚ್ಚದ 4 ರೈಲ್ವೆ ಓವರ್ ಬ್ರಿಡ್ಜ್​ಗಳ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಶಾಸಕ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಉಪಸ್ಥಿತರಿದ್ದರು.

ಇದರಲ್ಲಿ ಎರಡು ರೈಲ್ವೆ ಶಿವಮೊಗ್ಗದಾದರೆ ಇನ್ನೊಂದು ಭದ್ರಾವತಿಗೆ ಸಂಬಂಧಿಸಿದೆ. ಆನ್​ಲೈನ್​​​ನಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪಿಯೂಷ್ ಗೋಯಲ್, ಸಿಎಂ ಯಡಿಯೂರಪ್ಪ ಅವರಿಗೆ ಧನ್ಯವಾದ ಅರ್ಪಿಸಿದರು. 3 ರೈಲ್ವೆ ಮೇಲ್ಸೇತುವೆಗೆ ಇಂದು ಅಡಿಪಾಯ ಹಾಕಿರುವುದು ಸಂತೋಷವಾಗಿದೆ. ನಾವು ಕೆಲಸವನ್ನು ತ್ವರಿತವಾಗಿ ಮುಗಿಸಲು ಯತ್ನಿಸುತ್ತೇವೆ.

ಈ ಯೋಜನೆಗಳು ಶಿವಮೊಗ್ಗ ಜನರಿಗೆ ಸೇವೆ ಸಲ್ಲಿಸಲಿವೆ. ಇದು ವ್ಯವಹಾರಗಳನ್ನು ಸುಲಭಗೊಳಿಸುತ್ತದೆ ಮತ್ತು ಜನರ ಜೀವನವನ್ನು ಹೆಚ್ಚು ಅನುಕೂಲಕರಗೊಳಿಸುತ್ತದೆ.

ಇದರಿಂದ ರೈಲ್ವೆ ಸುರಕ್ಷತೆಯು ಸುಧಾರಿಸಲಿದೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಾರ್ಯಗಳು ಇದು ಅತ್ಯುತ್ತಮ ಪ್ರವಾಸಿ ತಾಣವಾಗಲಿದೆ. ಇದು ಭಾರತದ ಅತಿ ಹೆಚ್ಚು ಮತ್ತು ಏಷ್ಯಾದ 2ನೇ ಅತಿ ಎತ್ತರದ ಜಲಪಾತವನ್ನು ಹೊಂದಿದೆ ಎಂದಿದ್ದಾರೆ.

ಶಿವಮೊಗ್ಗದಿಂದ ಶಿಕಾರಿಪುರದಿಂದ ರಾಣಿಬೆನ್ನೂರ್‌ವರೆಗಿನ 103 ಕಿ.ಮೀ ಹೊಸ ಮಾರ್ಗದ ಕೆಲಸ ಸಹ ಶೀಘ್ರ ಮುಕ್ತವಾಗಲಿದೆ. ಬೆಂಗಳೂರಿನಿಂದ ಜನ ಶತಾಬ್ದಿ ಮತ್ತು ತಿರುಪತಿ ಮತ್ತು ಚೆನ್ನೈನಿಂದ ಎಕ್ಸ್‌ಪ್ರೆಸ್ ರೈಲುಗಳು ಈಗಾಗಲೇ ಶಿವಮೊಗ್ಗದ ಜನರಿಗೆ ಲಭ್ಯವಾಗುತ್ತಿವೆ ಎಂದಿದ್ದಾರೆ.

ಇದನ್ನೂ ಓದಿ:ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಸಚಿವ ಕತ್ತಿ ಅವರ ಹೇಳಿಕೆ ಕುರಿತು ಸಿಎಂ ಹೇಳಿದ್ದಿಷ್ಟೇ..

Last Updated : Feb 15, 2021, 7:31 PM IST

ABOUT THE AUTHOR

...view details