ಕರ್ನಾಟಕ

karnataka

ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಕ್ಸಿನ್​ ಕೊರತೆ ನೀಗಿಸಲು ಕ್ರಮ; ಸಚಿವ ಈಶ್ವರಪ್ಪ

By

Published : May 1, 2021, 10:00 PM IST

ಶಿಕಾರಿಪುರ ಹಾಗೂ ಸಾಗರದಲ್ಲೂ ಸಹ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಕೆ.ಎಸ್​. ಈಶ್ವರಪ್ಪ ತಿಳಿಸಿದ್ದಾರೆ.

meeting
meeting

ಶಿವಮೊಗ್ಗ: ಜಿಲ್ಲೆಯಲ್ಲಿ ಈಗ ಆಕ್ಸಿಜನ್ ಪ್ಲಾಂಟ್​ ಇದೆ. ಅದೇ ರೀತಿ ಶಿಕಾರಿಪುರ ಹಾಗೂ ಸಾಗರದಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಕೆ.ಎಸ್​. ಈಶ್ವರಪ್ಪ ತಿಳಿಸಿದರು. ಶಿವಮೊಗ್ಗದ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸೊರಬ ತಾಲೂಕಿನಲ್ಲಿ 50 ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಸೊರಬದಲ್ಲಿ‌ 30 ಬೆಡ್​ನ ಆಸ್ಪತ್ರೆ ಹಾಗೂ ಆನವಟ್ಟಿಯಲ್ಲಿ 20 ಬೆಡ್ ಆಸ್ಪತ್ರೆ ನಿರ್ಮಿಸಲಾಗುವುದು. ಜಿಲ್ಲೆಯಲ್ಲಿ ಸದ್ಯ ಕೋವಿಡ್ ವ್ಯಾಕ್ಸಿನ್ ಕೊರತೆ ಇದೆ. ಇದನ್ನು‌ ನಿವಾರಿಸಲು ಕ್ರಮ ತೆಗೆದು‌ಕೊಂಡಿದ್ದೇವೆ. ಈ ಕುರಿತು ಜಿಲ್ಲಾ ಪ್ರವಾಸದಲ್ಲಿ ಸಂಸದ ರಾಘವೇಂದ್ರ ಹಾಗೂ ಸ್ಥಳೀಯ ಶಾಸಕರು ಭಾಗಿಯಾಗಿ ತಮ್ಮ ಸಮಸ್ಯೆಯನ್ನು‌ ಹೇಳಿ‌ಕೊಂಡಿದ್ದಾರೆ ಎಂದರು.

ಸಭೆಯಲ್ಲಿ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ ನಾಯ್ಕ, ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ನೀಡುವ ಕೆ- ಶೀಟ್ ನಲ್ಲಿ ಎಲ್ಲಾ ಔಷಧ ನೀಡಿರುವ ಬಗ್ಗೆ ತಿಳಿಸಲಾಗಿರುತ್ತದೆ. ಆದರೆ ವಾಸ್ತವದಲ್ಲಿ ಅಲ್ಲಿ ಅವರಿಗೆ ಯಾವುದೇ ಔಷಧ ನೀಡಿರುವುದಿಲ್ಲ ಎಂಬ ಗಂಭೀರ ಆರೋಪ ಮಾಡಿದರು.‌ ಈ ಕುರಿತು ತನಿಖೆ ನಡೆಸಬೇಕು ಎಂದು‌ ಈಶ್ವರಪ್ಪ‌ ಡಿಸಿ ಶಿವಕುಮಾರರಿಗೆ ಸೂಚಿಸಿದರು.

ಸಭೆಯಲ್ಲಿ ಎಂಎಲ್​​ಸಿ ಆಯನೂರು ಮಂಜುನಾಥ್ ಕೇಳಿದ‌ ಪ್ರಶ್ನೆಗೆ ಉತ್ತರಿಸಲಾಗದೇ ಅಧಿಕಾರಿಗಳು ತಡವರಿಸಿದರು. ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪೊಲೀಸರು ಅಡ್ಡಿ ಪಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಎಸ್ಪಿಗೆ ಸಚಿವ ಈಶ್ಬರಪ್ಪ ತಿಳಿಸಿದರು. ಸಭೆಯಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ, ಎಂಎಲ್​ಸಿ ರುದ್ರೇಗೌಡ, ಎಸ್ಪಿ, ಜಿ.ಪಂ ಸಿಇಓ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

ABOUT THE AUTHOR

...view details