ಶಿವಮೊಗ್ಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕುರಿತು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ: ಸಚಿವ ಈಶ್ವರಪ್ಪ ವಾಗ್ದಾಳಿ ಶಿವಮೊಗ್ಗದ ಆಲ್ಕೋಳ ಅದಿ ಶಂಕರಚಾರ್ಯ ಬಡಾವಣೆಯಲ್ಲಿ ಬಿದ್ದ ಮನೆಯ ವೀಕ್ಷಣೆ ಮಾಡಿ ಮಾತನಾಡಿದ ಅವರು ತಿರುಕ ಹಗಲೆಲ್ಲಾ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಾನೆ. ರಾತ್ರಿ ಆದ್ರೆ ಸಾಕು ಮಲಗುತ್ತಾನೆ. ಹೀಗೆ ಮಲಗಿದಾಗ ತಾನು ಏನೇನೂ ಆಗುತ್ತೇನೆ ಎಂದು ಕನಸು ಕಾಣುತ್ತಾನೆ. ಅದೇ ರೀತಿ ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಬಿಜೆಪಿ- ಕೆಜೆಪಿ ಆಗದೆ ಹೋಗಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ. ಬಿಜೆಪಿಯ ಮತ ವಿಭಜನೆಯಾದ ಕಾರಣ ಸಿದ್ದು ಸಿಎಂ ಆದರೆ ವಿನಃ ,ಅವರ ಹೋರಾಟದಿಂದ ಸಿಎಂ ಆದವರಲ್ಲಾ ಎಂದರು. ಹಾಗಾದ್ರೆ ಅವರೆ ಸಿಎಂ ಆಗಿದ್ದರಲ್ಲಾ? ಚುನಾವಣೆಯಲ್ಲಿ ಯಾಕೆ ಕೇವಲ 78 ಸೀಟು ಪಡೆದು ಕೊಂಡ್ರಿ ಎಂದು ಪ್ರಶ್ನೆ ಮಾಡಿದರು. ಅಲ್ಲದೆ ನೀವು ದಲಿತರಿಗೆ, ಹಿಂದುಳಿದವರಿಗೆ ಏನೂ ಮಾಡದೆ, ಅವರ ಉದ್ದಾರ ಮಾಡಿದ್ದೆ ಎಂದು ಹೇಳಿಕೊಂಡು ಹೊರಟಿದ್ದೀರಿ ಎಂದು ಟೀಕಿಸಿದರು.
ನರೇಂದ್ರ ಮೋದಿರವರು ತಮ್ಮ ಅಭಿವೃದ್ಧಿ ಕಾರ್ಯದ ಮೂಲಕ 2ನೇ ಬಾರಿ ಪ್ರಧಾನಿಯಾಗಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಯಾಕೆ ಮತ್ತೆ ಸಿಎಂ ಆಗಲಿಲ್ಲ? ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಯಡಿಯೂರಪ್ಪನವರಿಗೆ ಪತ್ರ ಬರೆದರೆ ಸಂತೋಷ. ಆದ್ರೆ ವಿರೋಧ ಪಕ್ಷದಲ್ಲಿದ್ದೇನೆ ಅಂತ ನೆರೆ ಪರಿಹಾರದ ವಿಚಾರದಲ್ಲಿ ಟೀಕಿಸಬಾರದು. ಕಳೆದ 10 ವರ್ಷದಿಂದ ನೆರೆ ಹಾಗೂ ಬರ ಪರಿಹಾರಕ್ಕೆ ಕೇಂದ್ರ ನೀಡಿದೆ ಎಂಬ ಅಂಕಿ ಅಂಶವನ್ನುಟ್ಟುಕೊಂಡು ಸಿದ್ದರಾಮಯ್ಯ ಮಾತನಾಡಬೇಕು ಎಂದು ನೆರೆ ಪರಿಹಾರದ ಕುರಿತು ಸಿದ್ದರಾಮಯ್ಯನವರು ನೆರೆ ಪರಿಹಾರದ ಟೀಕೆಗೆ ಉತ್ತರ ನೀಡಿದರು.