ಶಿವಮೊಗ್ಗ: ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆಗೆ ಹೋರಾಟ ನಡೆಸುವ ಕುರಿತು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಸ್ವಕ್ಷೇತ್ರ ಶಿವಮೊಗ್ಗದಲ್ಲಿ ತಮ್ಮ ಸಮಾಜದ ಮುಖಂಡರ ಜೊತೆ ಸಭೆ ನಡೆಸಿದರು.
ಕುರುಬ ಸಮಾಜ ಎಸ್ಟಿಗೆ ಸೇರ್ಪಡೆ: ತವರು ಕ್ಷೇತ್ರದಲ್ಲಿ ಸಭೆ ನಡೆಸಿದ ಸಚಿವ ಕೆ.ಎಸ್ ಈಶ್ವರಪ್ಪ - ಎಸ್ಟಿ
ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಕುರಿತು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಈಶ್ವರಪ್ಪ ಇಂದು ತಮ್ಮ ತವರು ಕ್ಷೇತ್ರದಲ್ಲಿ ಸಭೆ ನಡೆಸಿ, ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಿದರು.
ಸಭೆ
ಬಾಲರಾಜ್ ಅರಸ್ ರಸ್ತೆಯಲ್ಲಿ ಕುರುಬರ ಹಾಸ್ಟೆಲ್ನಲ್ಲಿ ಸಚಿವ ಈಶ್ವರಪ್ಪನವರು ಶಿವಮೊಗ್ಗ ಜಿಲ್ಲಾ ಕುರುಬ ನಾಯಕರ ಜೊತೆ ಸಭೆ ನಡೆಸಿ, ಚರ್ಚಿಸಿದರು. ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಕುರಿತು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಈಶ್ವರಪ್ಪ ತವರು ಕ್ಷೇತ್ರದಲ್ಲಿ ಸಭೆ ನಡೆಸಿ, ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಿದರು.
ಹೋರಾಟ ಸಮಿತಿಯ ಖಂಚಾಚಿ ಕೆ.ಈ.ಕಾಂತೇಶ್ ಹೋರಾಟದ ರೊಪರೇಷೆ ಕುರಿತು ವಿವರಿಸಿದರು. ಈ ವೇಳೆ ಕುರುಬ ಸಮಾಜದ ರಾಜ್ಯ ಸಮಿತಿ ನಿರ್ದಶಕರುಗಳಾದ ರಂಗನಾಥ್, ಶರತ್ , ಮೈಲಾರಪ್ಪ ಸೇರಿ ಇತರರು ಹಾಜರಿದ್ದರು.