ಶಿವಮೊಗ್ಗ :ಜಿಲ್ಲೆಯ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ್ತಿ ಅದಿತಿ ರಾಜೇಶ್ ಅವರು ಕರ್ನಾಟಕ ಮಹಿಳಾ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಜನವರಿ 18ರಿಂದ 28ರವರೆಗೆ ಮುಂಬೈನಲ್ಲಿ ಟೂರ್ನಿ ನಡೆಯಲಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ರಾಜ್ಯ ಹಿರಿಯ ಮಹಿಳಾ ತಂಡ ಮುನ್ನಡೆಸುತ್ತಿದ್ದು, ಅದಿತಿ ರಾಜೇಶ್ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ಕ್ರಿಕೆಟ್ ಕೋಚಿಂಗ್ ಸೆಂಟರ್ನಲ್ಲಿ ಕೋಚ್ ನಾಗರಾಜ್ ಅವರಿಂದ ಅದಿತಿ ತರಬೇತಿ ಪಡೆದಿದ್ದಾರೆ.
ಅದಿತಿ ರಾಜೇಶ್ ಅಂತಿಮ ವರ್ಷದ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕಳೆದ 10 ವರ್ಷಗಳಿಂದ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದು ವಲಯ ಮಟ್ಟ, 10, 16, 19 ವಯೋಮಿತಿನಲ್ಲಿ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
ತಂದೆ ರಾಜೇಶ್ ಔಷಧ ಏಜೆನ್ಸಿ ಹೊಂದಿದ್ದಾರೆ. ತಾಯಿ ಕವಿತಾ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವಮೊಗ್ಗದ ನಿವಾಸಿಯಾಗಿರುವ ಇವರು ಮಗಳಿಗೆ ಉತ್ತಮ ತರಬೇತಿ ದೂರಕಿಸಿ ಕೊಟ್ಟಿದ್ದಾರೆ.