ಶಿವಮೊಗ್ಗ :ವಿದೇಶಕ್ಕೆ ಹೋಗಬೇಕಾದ ಯುವಕ ಪ್ರಿಯತಮೆ ಸಿಗಲಿಲ್ಲವೆಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸನಗರ ತಾಲೂಕಿನ ಹಾಲುಗುಡ್ಡೆ ಗ್ರಾಮದಲ್ಲಿ ನಡೆದಿದೆ. ಹಾಲುಗುಡ್ಡೆಯ ನಿವಾಸಿ ರಮೇಶ್ ಎಂಬುವರ ಅವರ ಮಗ ಅವಿನಾಶ್ (27) ಎಂಬಾತ ಆತ್ಮಹತ್ಯೆ ಮಾಡಿ ಕೊಂಡ ಯುವಕ.
ಹಾಲುಗುಡ್ಡ ಗ್ರಾಮದ ಯುವತಿ ಹಾಗೂ ಅವಿನಾಶ ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಳೆದ ಒಂದು ತಿಂಗಳ ಹಿಂದೆ ಯುವತಿಯು ಬೇರೆಯವನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.