ಕರ್ನಾಟಕ

karnataka

ETV Bharat / state

ರಾಕಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಪಾಗಲ್​​ ಪ್ರೇಮಿಯಿಂದ ಯುವತಿ ಕೆನ್ನೆಗೆ ಚಾಕು ಇರಿತ - shivamogacrimenews

ಪ್ರೀತಿಸಲು ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಆಕೆಯ ಕೆನ್ನೆಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಸಾಗರದಲ್ಲಿ ನಡೆದಿದೆ.

ಪಾಗಲ್ ಪ್ರೇಮಿಯಿಂದ ಯುವತಿಗೆ ಚಾಕುವಿನಿಂದ ಇರಿತ

By

Published : Sep 2, 2019, 3:09 PM IST

ಶಿವಮೊಗ್ಗ:ತನ್ನನ್ನು ಪ್ರೀತಿಸಲು ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಆಕೆಯ ಕೆನ್ನೆಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಸಾಗರ ಪಟ್ಟಣದಲ್ಲಿ ನಡೆದಿದೆ.

ಸಾಗರ ಪಟ್ಟಣದ ಯುವತಿಯೊಬ್ಬಳನ್ನು ರಾಕೇಶ್​ ಎಂಬಾತ ಪ್ರೀತಿಸುತ್ತಿದ್ದನಂತೆ. ರಾಕೇಶ್​ನ ಪ್ರೀತಿಯನ್ನು ಆಕೆ ನಿರಾಕರಿಸಿದ್ದಳು. ಇದರಿಂದ ಬೇಸರಗೊಂಡಿದ್ದ ರಾಕೇಶ್, ನೀನು ನನ್ನನ್ನು ಪ್ರೀತಿಸದ ಮೇಲೆ ನಾನು ನೀನು ಅಣ್ಣ ತಂಗಿ ಆಗೋಣ. ಬಂದು ನನಗೆ ರಾಕಿ ಕಟ್ಟು ಎಂದು ಹೇಳಿ ಇಂದು ಕರೆಯಿಸಿಕೊಂಡು ಯುವತಿಯ ಮನೆ ಮುಂದೆಯೇ ಆಕೆಯ ಕೆನ್ನೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಗಾಯಗೊಂಡ ಯುವತಿಯನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ. ಸಾಗರ ಪೇಟೆ ಪೊಲೀಸರು ಪರಾರಿಯಾದ ಆರೋಪಿ ರಾಕೇಶನಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details