ಶಿವಮೊಗ್ಗ:ಷಹಜಹಾನ್ ಎಂದರೆ ನಮಗೆ ನೆನಪಾಗುವುದು ತಾಜ್ ಮಹಲ್. ತನ್ನ ಪ್ರೀತಿಯ ಪತ್ನಿಗಾಗಿ ಕಟ್ಟಿಸಿದ ಈ ಸುಂದರ ಸೌಧ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿದೆ. ಆದರೆ ತಾಜ್ಮಹಲ್ಗೂ ಮುನ್ನವೇ ಕಟ್ಟಲಾಗಿರುವ ಪ್ರೇಮದ ಕಾಣಿಕೆಯೊಂದು ನಮ್ಮ ಕರ್ನಾಟಕದಲ್ಲಿ ಇದೆ ಎನ್ನಲಾಗಿದೆ.
ಪತ್ರಕರ್ತ ಎಸ್. ಶ್ಯಾಮ್ಪ್ರಸಾದ್ ಈ ವಿಚಾರನ್ನು ಸಾಕ್ಷ್ಯಾಧಾರದ ಮೂಲಕ ವಿಡಿಯೋ ರೂಪದಲ್ಲಿ ಹೊರ ತಂದಿದ್ದಾರೆ. ಅಷ್ಟೇ ಅಲ್ಲ ತಮ್ಮ 'ಎನಿಗ್ಮಾಸ್ ಆಫ್ ಕರ್ನಾಟಕ' ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕದಲ್ಲಿ ಬರುವ ಹಲವಾರು ವಿಶೇಷ ಮಾಹಿತಿಗಳಲ್ಲಿ ಪ್ರಮುಖವಾಗಿ ರಹಸ್ಯ ಕಥೆಗಳ ಅನಾವರಣ ಈಗ ಯೂಟ್ಯೂಬ್ನಲ್ಲಿ ದೊರೆಯಲಿದೆ ಎಂದು ಶ್ಯಾಮ್ ಪ್ರಸಾದ್ ಹೇಳುತ್ತಾರೆ. ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರಿಗೆ ಇದು ಹೇಳಿ ಮಾಡಿಸಿದ ವಿಚಾರ ಎನ್ನಬಹುದು.