ಶಿವಮೊಗ್ಗ: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ ಹ್ಯಾಕ್ ಮಾಡಲಾಗಿದೆ. ಪ್ಯಾಲಿಸ್ಟೈನ್ ಬೆಂಬಲಿಗರು ಎಂದು ಹೇಳಿಕೊಂಡು ಹ್ಯಾಕ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೆಬ್ಸೈಟ್ ಅನ್ನು ನಿನ್ನೆ ರಾತ್ರಿ ಕಲೀಮಲ್ಯಾಂಗ್ ಬ್ಲ್ಯಾಕ್ ಹ್ಯಾಟ್ ಟೀಂ ಹ್ಯಾಕ್ ಮಾಡಿದೆ. ಸೇವ್ ಪ್ಯಾಲೆಸ್ಟೈನ್- ಇಸ್ರೇಲ್ ಡಾಗ್ ಎಂದು ವೆಬ್ಸೈಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ವೆಬ್ಸೈಟ್ ಹ್ಯಾಕ್ ಮಾಡಿರುವ ಕುರಿತು ವಿವಿಯ ಒಂದು ಟೀಂ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಕುವೆಂಪು ವಿವಿಯ ವೆಬ್ಸೈಟ್ ಹ್ಯಾಕ್: ಸಿಇಎನ್ ಠಾಣೆಯಲ್ಲಿ ದೂರು ದಾಖಲು - ವಿವಿಯ ಟೆಕ್ನಿಕಲ್ ಟೀಂ
Kuvempu University website hack: ಸದ್ಯ ವೆಬ್ಸೈಟ್ ಸೇವೆ ನಿಲ್ಲಿಸಿರುವ ವಿವಿಯ ಟೆಕ್ನಿಕಲ್ ಟೀಂ, ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಪ್ಯಾಲೆಸ್ಟೈನ್ ಬೆಂಬಲಿಗರಿಂದ ಕುವೆಂಪು ವಿವಿಯ ವೆಬ್ಸೈಟ್ ಹ್ಯಾಕ್
Published : Dec 21, 2023, 1:10 PM IST
ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ ಹ್ಯಾಕ್ ಆಗಿರುವುದರಿಂದ ವಿವಿಯ ಟೆಕ್ನಿಕಲ್ ಟೀಂ ವೆಬ್ಸೈಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಇತ್ತೀಚೆಗಷ್ಟೆ ವಿವಿಯ ವಿವಿಧ ಕೋರ್ಸ್ಗಳ ದಾಖಲಾತಿ ಪ್ರಕ್ರಿಯೆ ಇದೇ ವೆಬ್ಸೈಟ್ ಮೂಲಕ ನಡೆದಿತ್ತು. ಇದು ಕುವೆಂಪು ವಿವಿಯ ಓಪನ್ ಬ್ಲಾಕ್ ಆಗಿದೆ. ಈ ಕುರಿತು ಈ ಟಿವಿ ಭಾರತ್ ಕುವೆಂಪು ವಿವಿಯ ಕುಲಪತಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದು, ಅವರು ಕರೆಗೆ ಸಿಕ್ಕಿಲ್ಲ
ಇದನ್ನೂ ಓದಿ:ನಟಿ ತಾರಾ ಫೇಸ್ ಬುಕ್ ಖಾತೆ ಹ್ಯಾಕ್: ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲು