ಶಿವಮೊಗ್ಗ :ಚಾಲಕನ ನಿಯಂತ್ರಣ ತಪ್ಪಿದ KSRTC ರಾಜಹಂಸ ಬಸ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮುಂಭಾಗದ ಮರಕ್ಕೆ ಡಿಕ್ಕಿ ಹೊಡೆದಿದೆ.
ಅಬ್ಬಾ ಬದುಕಿದವು ಬಡ ಜೀವಗಳು: KSRTC ಬಸ್ ಮರಕ್ಕೆ ಡಿಕ್ಕಿ, ತಪ್ಪಿದ ಭಾರಿ ಅನಾಹುತ - ಬಸ್ ಅಪಘಾತ
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಕೆಎಸ್ಆರ್ಟಿಸಿ ವಾಹನ, ಶಿರಸಿ ಕಡೆ ಹೊರಟಿತ್ತು. ಈ ಮಾರ್ಗದಲ್ಲಿ ಬರುವ ಮೆಗ್ಗಾನ್ ಆಸ್ಪತ್ರೆಯ ಮುಂಭಾಗ ಪೊಲೀಸ್ ಕ್ಯಾಂಟಿನ್ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಮರಕ್ಕೆ ಗುದ್ದಿದ ರಭಸಕ್ಕೆ ಬಸ್ನ ಗಾಜು ಪುಡಿಪುಡಿಯಾಗಿದೆ.
KSRTC ಬಸ್ ಮರಕ್ಕೆ ಡಿಕ್ಕಿ
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಈ ವಾಹನ, ಶಿರಸಿ ಕಡೆ ಹೊರಟಿತ್ತು. ಈ ಮಾರ್ಗದಲ್ಲಿ ಬರುವ ಮೆಗ್ಗಾನ್ ಆಸ್ಪತ್ರೆಯ ಮುಂಭಾಗ ಪೊಲೀಸ್ ಕ್ಯಾಂಟಿನ್ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಮರಕ್ಕೆ ಗುದ್ದಿದ ರಭಸಕ್ಕೆ ಬಸ್ನ ಗಾಜು ಪುಡಿಪುಡಿಯಾಗಿದೆ.
ಇನ್ನು ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು ಎನ್ನಲಾಗಿದೆ. ಹಾಗೂ ಬಸ್ ನಗರದಲ್ಲೇ ಸಂಚರಿಸುತ್ತಿದ್ದ ಬಸ್ನ ವೇಗ ಕೂಡ ಕಡಿಮೆ ಇತ್ತು ಎನ್ನಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ.