ಕರ್ನಾಟಕ

karnataka

ETV Bharat / state

ನೂತನ ಯೋಗ ಕೇಂದ್ರ ಉದ್ಘಾಟಿಸಿದ ಸಚಿವ ಈಶ್ವರಪ್ಪ - shivamogga Yoga center news

ತಮ್ಮ‌ ನಿವಾಸದ ಬಳಿ ನೂತನವಾಗಿ ನಿರ್ಮಿಸಿರುವ ಯೋಗ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಈಶ್ವರಪ್ಪ, ಯೋಗ ಕೇಂದ್ರ ಯೋಗ ಸೇರಿದಂತೆ ಇತರೆ‌ ಧಾರ್ಮಿಕ ಚಟುವಟಿಕೆಗಳ ತಾಣವಾಗಲಿ ಎಂದರು.

K. S Eshwarappa
ನೂತನ ಯೋಗ ಕೇಂದ್ರ ಉದ್ಘಾಟಿಸಿದ ಕೆಎಸ್​ಈ

By

Published : Jul 13, 2020, 1:58 PM IST

ಶಿವಮೊಗ್ಗ:ನಗರದ ಮಲ್ಲೇಶ್ವರಂ ಬಡಾವಣೆಯಲ್ಲಿನ ನೂತನ ಯೋಗ ಮಂದಿರವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.

ತಮ್ಮ‌ ನಿವಾಸದ ಬಳಿ ನೂತನವಾಗಿ ನಿರ್ಮಿಸಿರುವ ಯೋಗ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಕೇಂದ್ರ ಯೋಗ ಸೇರಿದಂತೆ ಇತರೆ‌ ಧಾರ್ಮಿಕ ಚಟುವಟಿಕೆಗಳ ತಾಣವಾಗಲಿ ಎಂದರು.

ಯೋಗ ಮಾಡುವುದರಿಂದ ವೈದ್ಯರಿಂದ ದೂರವಿರಬಹುದು. ಯೋಗದಿಂದ ಉತ್ತಮ ಆರೋಗ್ಯ ಪಡೆಯುವುದರ ಜೊತೆಗೆ ಉತ್ತಮ ಮಾನಸಿಕ ಸಮತೋಲನ ಪಡೆಯಬಹುದು ಎಂದರು.

ನೂತನ ಯೋಗ ಕೇಂದ್ರ ಉದ್ಘಾಟಿಸಿದ ಸಚಿವ ಈಶ್ವರಪ್ಪ

ಯೋಗ ಮಂದಿರದಲ್ಲಿ ಬೆಳಗ್ಗಯಿಂದ ರಾತ್ರಿಯವರೆಗೆ ಯೋಗದ ಜೊತೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿ ಎಂದು ಹಾರೈಸಿದರು. ಈ ವೇಳೆ ಅವರ ಪತ್ನಿ ಜಯಲಕ್ಷ್ಮಿ ಸೇರಿ‌ ಇತರರು ಇದ್ದರು.

ABOUT THE AUTHOR

...view details