ಶಿವಮೊಗ್ಗ: ಡಿ.ಕೆ. ಶಿವಕುಮಾರ್ ಅವರ ತಾಯಿ ಕಣ್ಣೀರು ಹಾಕಿದ್ದನ್ನು ನಾನು ನೋಡಿದ್ದೇನೆ. ಈ ರೀತಿಯ ಪರಿಸ್ಥಿತಿಯನ್ನು ಯಾರೂ ತಂದುಕೊಳ್ಳಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ರು.
ತಪ್ಪಿತಸ್ಥರಲ್ಲದವರಿಗೆ ನ್ಯಾಯ ಸಿಕ್ಕೇ ಸಿಗುತ್ತೆ: ಸಚಿವ ಈಶ್ವರಪ್ಪ
ನಮ್ಮಲ್ಲಿ ಸಂವಿಧಾನ ಇರುವುದರಿಂದ ಯಾರು ತಪ್ಪಿತಸ್ಥರಲ್ಲವೋ ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಮ್ಮಲ್ಲಿ ಸಂವಿಧಾನ ಇರುವುದರಿಂದ ಯಾರು ತಪ್ಪಿತಸ್ಥರಲ್ಲವೋ ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ಬಿಜೆಪಿಯವರ ಮೇಲೆ ಈಗ ಕಾಂಗ್ರೆಸ್ನವರು ಮಾಡುತ್ತಿರುವ ಆರೋಪ ರಾಜಕೀಯ ಅಷ್ಟೇ. ನಾವು ಇದನ್ನು ಈ ಹಿಂದೆಯೂ ಅನುಭವಿಸಿದ್ದೇವೆ. ದ್ವೇಷದ ರಾಜಕಾರಣ ಆರೋಪ ಆಡಳಿತ ಪಕ್ಷದ ಮೇಲೆ ಬರುವುದು ಸಹಜ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ನಮಗೂ ಇಂತಹ ಅನುಭವ ಆಗಿದೆ ಎಂದರು.
ಡಿ.ಕೆ. ಶಿವಕುಮಾರ್ ಅವರನ್ನು ಇಡಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ. ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ನ್ಯಾಯ, ಯಾವುದು ಅನ್ಯಾಯ ಎಂಬುದು ನ್ಯಾಯಾಲಯದಲ್ಲಿ ತೀರ್ಮಾನ ಆಗಲಿದೆ. ಇದನ್ನು ರಾಜ್ಯದ ಆರೂವರೆ ಕೋಟಿ ಜನ ನೋಡ್ತಾ ಇದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿದ್ರು.