ಕರ್ನಾಟಕ

karnataka

ETV Bharat / state

ದೇಶಕ್ಕೆ ವೈಚಾರಿಕ ಚಿಂತನೆಯ ಬೆಳಕು ನೀಡಿದ ಜೈನ ಸಮಾಜ: ಕೆ.ಎಸ್.ಈಶ್ವರಪ್ಪ - ಲೆಟೆಸ್ಟ್ ಜೈನ ಸಮುದಾಯ ಭವನ ಉಧ್ಘಾಟನೆ

ಶಿವಮೊಗ್ಗದಲ್ಲಿಂದು ಜೈನ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮ ನೆರವೇರಿದೆ. ಈ ವೇಳೆ ಮಾತನಾಡಿದ ಸಚಿವ ಕೆ. ಎಸ್‌. ಈಶ್ವರಪ್ಪ, ಜೈನ ಸಮಾಜ ಚಿಕ್ಕ ಸಮಾಜವಲ್ಲ, ಇಡೀ ದೇಶಕ್ಕೆ ವೈಚಾರಿಕತೆಯ ಚಿಂತನೆಯ ಬೆಳಕು ನೀಡಿದ ಸಮಾಜ ಎಂದು ಹೇಳಿದ್ರು.

ಜೈನ ಸಮಾಜ ದೇಶಕ್ಕೆ ಬೆಳಕಿನ ವೈಚಾರಿಕತೆ ಚಿಂತನೆ ನೀಡಿದ ಸಮಾಜ : ಕೆ.ಎಸ್ ಈಶ್ವರಪ್ಪ

By

Published : Nov 9, 2019, 6:21 PM IST

ಶಿವಮೊಗ್ಗ : ಜೈನ ಧರ್ಮೀಯರದ್ದು ಚಿಕ್ಕ ಸಮಾಜವಲ್ಲ, ಇಡೀ ದೇಶಕ್ಕೆ ವೈಚಾರಿಕ ಚಿಂತನೆಯ ಬೆಳಕು ನೀಡಿದ ಸಮಾಜವೆಂದು ಸಚಿವ ಕೆ.ಎಸ್ ಈಶ್ವರಪ್ಪ ಕೊಂಡಾಡಿದರು.

ಜೈನ ಸಮಾಜ ದೇಶಕ್ಕೆ ವೈಚಾರಿಕ ಚಿಂತನೆಯ ಬೆಳಕು ನೀಡಿದ ಸಮಾಜ: ಕೆ.ಎಸ್. ಈಶ್ವರಪ್ಪ

ಕೃಷಿನಗರದಲ್ಲಿರುವ ಜೈನ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಈಶ್ವರಪ್ಪ, ವೀರೇಂದ್ರ ಹೆಗ್ಗಡೆಯವರು ಸಮಾಜಕ್ಕೆ ಮಾಡುತ್ತಿರುವ ಸಾಮಾಜಿಕ ಕೆಲಸಗಳು ನನಗೆ ಪ್ರೇರಣೆ. ಅವರು ಮಾಡುತ್ತಿರುವ ಕೆಲಸಗಳು ಸರ್ಕಾರಗಳಿಂದಲೂ ಸಹ ಮಾಡಲೂ ಸಾಧ್ಯವಿಲ್ಲ ಎಂದು ಶ್ಲಾಘಿಸಿದ್ರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾತನಾಡಿ, ಬಡತನ, ಶ್ರೀಮಂತಿಕೆ ಎನ್ನುವುದು ನಮ್ಮ ಜೇಬಿನಲ್ಲಿಲ್ಲ. ಬ್ಯಾಂಕ್ ಖಾತೆಗಳಲ್ಲೂ ಇಲ್ಲ. ಅದು ನಮ್ಮ ದೃಷ್ಟಿ, ಧರ್ಮ ಹಾಗು ಆಚರಣೆಯಲ್ಲಿದೆ. ಜನರನ್ನು ದೇವರು ಭಕ್ತಿಭಾವದಿಂದ ಗುರುತಿಸುತ್ತಾನೆ ಎಂದು ತಿಳಿಸಿದ್ರು.

ABOUT THE AUTHOR

...view details