ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಮತ್ತೆ 4 ಕೊರೊನಾ ಸೋಂಕಿತರು ಪತ್ತೆ - In Shimoga again 4 Coronas infected

ಶಿವಮೊಗ್ಗದಲ್ಲಿ ಇಂದು 4 ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 104 ಕ್ಕೆ ಏರಿಕೆಯಾಗಿದೆ.

In Shimoga again 4 Coronas infected
ಶಿವಮೊಗ್ಗದಲ್ಲಿ ಮತ್ತೆ 4 ಕೊರೊನಾ ಸೋಂಕಿತರು ಪತ್ತೆ

By

Published : Jun 17, 2020, 8:43 PM IST

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಮತ್ತೆ 4 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಕಿತರ ಸಂಖ್ಯೆ 104 ಕ್ಕೆ ಏರಿಕೆಯಾಗಿದೆ.

P- 7571 ಹಾಗೂ P-7572 ರವರಿಗೆ P-6149 ರ ಸಂಪರ್ಕದಿಂದ ಕೊರೊನಾ ಸೂಂಕು ಹರಡಿದೆ. ಇನ್ನೂ ಈ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಕುಂಬಾರ ಗುಂಡಿ ಹಾಗೂ ತುಮಕೂರು ಶ್ಯಾಮರಾಯ ರಸ್ತೆ ಸಹ ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ.

ಇನ್ನುಳಿದಂತೆ P-7573 5 ವರ್ಷದ ಹೆಣ್ಣು ಮಗುವಿಗೆ ತೀವ್ರ ಉಸಿರಾಟದ ತೂಂದರೆಯಿಂದ SARI ಪ್ರಕರಣದಡಿ ಮೆಗ್ಗಾನ್​​ಗೆ ದಾಖಲು ಮಾಡಲಾಗಿದೆ. P-7574 5 ವರ್ಷದ ಗಂಡು ಮಗು ತಂದೆ- ತಾಯಿಯ‌ ಜೊತೆ ಮಹಾರಾಷ್ಟ್ರದಿಂದ ವಾಪಸ್ ಆಗಿತ್ತು.

ಜಿಲ್ಲೆಯಲ್ಲಿ ಇಂದು ಒಂದೇ ದಿನ 15 ಜನ ಬಿಡುಗಡೆಯಾಗಿದ್ದಾರೆ. ಇದು ಜಿಲ್ಲೆಯ ಜನತೆ ಸ್ವಲ್ಪ‌ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯ 104 ಪ್ರಕರಣದಲ್ಲಿ 69 ಜನ ಬಿಡುಗಡೆಯಾಗಿದ್ದು, ಸದ್ಯ 35 ಪ್ರಕರಣಗಳು ಸಕ್ರೀಯವಾಗಿದೆ.

ABOUT THE AUTHOR

...view details