ಶಿವಮೊಗ್ಗ:ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ - ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ 6,7 ಮತ್ತು 11 ನೇ ತಿರುವಿನಲ್ಲಿ ಭಾರಿ ಮಳೆ ಮತ್ತು ಭಾರಿ ವಾಹನಗಳ ಓಡಾಟದಿಂದಾಗಿ ಸಣ್ಣ ಬಿರುಕುಗಳು ಹಾಗೂ ಅಲ್ಲಲ್ಲಿ ರಸ್ತೆ ಕುಸಿತ ಕಂಡು ಬಂದಿದೆ. ಅಲ್ಲದೇ ಹೆಚ್ಚಿನ ಮಳೆಯಿಂದಾಗಿ ತಡೆಗೋಡೆ ಕುಸಿದಿದ್ದು, ಅಪಘಾತದ ಸಂಭವವಿರುವುದರಿಂದ ತಾತ್ಕಾಲಿಕವಾಗಿ ಭಾರಿ ವಾಹನ ಸಂಚಾರ ನಿಷೇಧಿಸಿ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಮಣಿ ಆದೇಶಿಸಿದ್ದಾರೆ.
ತಕ್ಷಣದಿಂದ ದಿ: 27-07-2023 ರಿಂದ 15-09-2023 ರವರೆಗೆ ಈ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಿದ್ದು, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಲಾಗಿದೆ. ಭಾರಿ ವಾಹನಗಳನ್ನು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಆದೇಶಿಸಲಾಗಿದೆ.
ತೀರ್ಥಹಳ್ಳಿ-ಉಡುಪಿ ಮಾರ್ಗದಲ್ಲಿ ಚಲಿಸುವ ಭಾರೀ ವಾಹನಗಳು ತೀರ್ಥಹಳ್ಳಿ-ಆಗುಂಬೆ-ಶೃಂಗೇರಿ-ಮಾಳಾಘಾಟ್-ಕಾರ್ಕಳ-ಉಡುಪಿ ಮಾರ್ಗ ಹಾಗೂ ತೀರ್ಥಹಳ್ಳಿ-ಮಾಸ್ತಿಕಟ್ಟೆ-ಸಿದ್ದಾಪುರ-ಕುಂದಾಪುರ-ಉಡುಪಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶಿಸಿದ್ದಾರೆ.
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 165.00 ಮಿ ಮೀ ಮಳೆಯಾಗಿದ್ದು, ಸರಾಸರಿ 23.57 ಮಿ ಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿ ಮಿ ಇದ್ದು, ಇದುವರೆಗೆ ಸರಾಸರಿ 694.06 ಮಿ ಮೀ ಮಳೆ ದಾಖಲಾಗಿದೆ.
ಶಿವಮೊಗ್ಗ 08.50 ಮೀ ಮೀ. ಭದ್ರಾವತಿ 06.70 ಮಿ ಮಿ. ತೀರ್ಥಹಳ್ಳಿ 28.30 ಮಿ ಮಿ. ಸಾಗರ 41.10 ಮಿ ಮಿ. ಶಿಕಾರಿಪುರ 14.60 ಮಿ ಮಿ. ಸೊರಬ 30.20 ಮಿ ಮಿ ಹಾಗೂ ಹೊಸನಗರ 35.60 ಮಿ ಮಿ ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಗಳಲ್ಲಿ:
ಲಿಂಗನಮಕ್ಕಿ ಜಲಾಶಯ
- 1819 (ಗರಿಷ್ಠ)
- 1784.40 (ಇಂದಿನ ಮಟ್ಟ)
- 42990.00 (ಒಳಹರಿವು)
- 0.00 (ಹೊರಹರಿವು)
- 1798.30 (ಕಳೆದ ವರ್ಷ ನೀರಿನ ಮಟ್ಟ)
ಭದ್ರಾ ಜಲಾಶಯ
- 186 (ಗರಿಷ್ಠ)
- 158.00 (ಇಂದಿನ ಮಟ್ಟ)
- 28296.00 (ಒಳಹರಿವು)
- 183.00 (ಹೊರಹರಿವು)
- 184.60 (ಕಳೆದ ವರ್ಷದ ನೀರಿನ ಮಟ್ಟ)
ತುಂಗಾ ಜಲಾಶಯ
- 588.24 (ಗರಿಷ್ಠ),
- 587.84 (ಇಂದಿನ ಮಟ್ಟ),
- 43315.00 (ಒಳಹರಿವು),
- 39299.00 (ಹೊರಹರಿವು)
- 588.24 (ಕಳೆದ ವರ್ಷದ ನೀರಿನ ಮಟ್ಟ)
ಮಾಣಿ ಜಲಾಶಯ
- 595 (ಎಂಎಸ್‍ಎಲ್‍ಗಳಲ್ಲಿ),
- 579.72 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ),
- 5066 (ಒಳಹರಿವು),
- 0.00 (ಹೊರಹರಿವು ಕ್ಯೂಸೆಕ್ಗಳಲ್ಲಿ)
- ಕಳೆದ ವರ್ಷದ ನೀರಿನ ಮಟ್ಟ 584.08 (ಎಂಎಸ್‍ಎಲ್‍ಗಳಲ್ಲಿ)