ಕರ್ನಾಟಕ

karnataka

ETV Bharat / state

ಆಗುಂಬೆ ಘಾಟಿಯಲ್ಲಿ ದೊಡ್ಡ ವಾಹನಗಳ ಸಂಚಾರ ನಿಷೇಧ.. ಜಿಲ್ಲಾಧಿಕಾರಿ ಆದೇಶ - Shimoga District Agumbe Ghat

ವಿಪರೀತ ಮಳೆಯಾಗುತ್ತಿರುವ ಹಿನ್ನಲೆ ಆಗುಂಬೆ ಘಾಟಿ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಘಾಟಿ ರಸ್ತೆಯು ಅತ್ಯಂತ ಕಿರಿದಾಗಿದ್ದು ಕುಸಿತವಾದರೆ ಕಾಮಗಾರಿ ನಡೆಸುವುದು ಕಷ್ಟಕರವಾಗಲಿದೆ. ಆದ್ದರಿಂದ ಮಳೆಗಾಲ ಕೊನೆಗೊಳ್ಳುವ ತನಕ ಭಾರಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.

ಆಗುಂಬೆ ಘಾಟಿ ರಸ್ತೆ

By

Published : Aug 16, 2019, 7:58 PM IST

ಶಿವಮೊಗ್ಗ: ಮಲೆನಾಡು‌ ಹಾಗೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ವಿಪರೀತ ಮಳೆಯಾದ ಹಿನ್ನಲೆ ಭಾರಿ ವಾಹನಗಳು ಸಂಚರಿಸಿದರೆ ಘಾಟಿ ಕುಸಿಯುವ ಭೀತಿಯಿದೆ. ಆದ್ದರಿಂದ 12 ಟನ್ ಗಿಂತ ಹೆಚ್ಚು ಭಾರ ಹೊತ್ತ ವಾಹನಗಳು ಸಂಚಾರ ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದರಿಂದ ದೊಡ್ಡ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್ ಬೀಳಲಿದೆ.

ಆಗುಂಬೆ ಘಾಟಿ ರಸ್ತೆ..

ಆಗುಂಬೆ ಘಾಟಿಯ ರಾಷ್ಟ್ರೀಯ‌ ಹೆದ್ದಾರಿ‌169 A ಕರಾವಳಿಯಿಂದ ಸೊಲ್ಲಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇಲ್ಲಿ ಭಾರಿ ವಾಹನಗಳ ಸಂಚಾರ ಇದ್ದೇ ಇರುತ್ತದೆ. ಆದರೆ, ಆಗುಂಬೆ ಘಾಟಿಯು ಅತ್ಯಂತ ಸಣ್ಣ ಘಾಟಿ ಆಗಿರುವುದರಿಂದ, ಇಲ್ಲಿ ಭೂ‌ ಕುಸಿತ ಉಂಟಾದರೆ ಕಾಮಗಾರಿ ನಡೆಸುವುದು ಕಷ್ಟಕರವಾಗಲಿದೆ. ಆದ್ದರಿಂದ ಮಳೆಗಾಲ‌ ಮುಗಿಯುವ ತನಕ ಭಾರಿ ವಾಹನಗಳಿಗೆ ತಡೆ ನೀಡಲಾಗಿದೆ.

ಜಿಲ್ಲಾಧಿಕಾರಿ ಆದೇಶ

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳಿಗೆ ತಡೆ ನೀಡಿರುವ ಕಾರಣ ಹೊಸನಗರದ ಹುಲಿಕಲ್ ಘಾಟಿ ರಸ್ತೆಯನ್ನು ಸಂಚಾರಕ್ಕೆ ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಕೆ ಬಿ ಆದೇಶ ನೀಡಿದ್ದಾರೆ.

ಜಿಲ್ಲಾಧಿಕಾರಿ ಆದೇಶ

ABOUT THE AUTHOR

...view details