ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಎರಡಲ್ಲ, 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುವುದಿಲ್ಲ: ಕೆಎಸ್ ಈಶ್ವರಪ್ಪ ಟಾಂಗ್​ - etv bhart karnataka

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎರಡಲ್ಲ, 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುವುದಿಲ್ಲ - ಸಿದ್ದರಾಮಯ್ಯ ಕುರುಬರ ನಾಯಕ ಎಂದು ಹೇಳಿಕೊಳ್ಳುತ್ತಾರೆ, ಕುರುಬರಿಗೆ ಏನು ಮಾಡಿದ್ದೀರಿ ಹೇಳಿ ಎಂದು ಪ್ರಶ್ನಿಸಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ.

Former minister KS Eshwarappa
ಮಾಜಿ ಸಚಿವ ಕೆಎಸ್ ಈಶ್ವರಪ್ಪ

By

Published : Jan 14, 2023, 7:54 PM IST

Updated : Jan 14, 2023, 8:24 PM IST

ಮಾಜಿ ಸಚಿವ ಕೆಎಸ್ ಈಶ್ವರಪ್ಪ

ಶಿವಮೊಗ್ಗ:ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎರಡಲ್ಲ, 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುವುದಿಲ್ಲ. ರಾಜ್ಯದ ಜನರೇ ಅವರನ್ನು ಸೋಲಿಸುತ್ತಾರೆ. ಇದು ನಿಶ್ಚಿತ ಎಂದು ಶಾಸಕ ಕೆಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಅವರದೇ ಪಕ್ಷದವರೇ ಸೋಲಿಸುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಾಗಿ ಅವರು ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಗೆದ್ದು ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಐದು - ಆರು ಸಾವಿರ ಮತಗಳನ್ನೂ ಪಡೆಯುವುದಿಲ್ಲ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ್ದಾರೆ. ಶ್ರಿನಿವಾಸ್​ ಪ್ರಸಾದ್​ಗೆ ಮೋಸ ಮಾಡಿದರು, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ರನ್ನು ಸೋಲಿಸಿದರು, ಮಾಜಿ ಸಚಿವ ಮುನಿಯಪ್ಪ ಅವರನ್ನು ಸೋಲಿಸಿದ್ದರು, ಈ ನಾಲ್ಕೇ ಜನ ಕೋಲಾರದಲ್ಲಿರುವ ದಲಿತರ 60 ಸಾವಿರ ಮತಗಳಲ್ಲಿ ಸಿದ್ದರಾಮಯ್ಯ ಐದು - ಆರು ಸಾವಿರ ಮತಗಳನ್ನೂ ಪಡೆಯುವುದಿಲ್ಲ. ಹಾಗಾಗಿ ದಲಿತರ ಪರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೆಲಸ ಮಾಡಿರುವುದರಿಂದ ಅತಿ ಹೆಚ್ಚು ಮತಗಳು ಬಿಜೆಪಿಗೆ ಬರುತ್ತವೆ ಎಂದರು.

ಕುರುಬರು ಸಹ ಸೆಡ್ಡು ತಿರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ:ಸಿದ್ದರಾಮಯ್ಯ ಕುರುಬರ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಕುರುಬರಿಗೆ ಏನು ಮಾಡಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ಕುರುಬರನ್ನು ಎರಡನೇ ಹಂತದಲ್ಲಿ ಬೆಳೆಸುವುದಿರಲ್ಲಿ, ಬೆಳೆಯುತ್ತಿರುವಂತ ವರ್ತೂರು ಪ್ರಕಾಶ್​ಗೆ ಅಡ್ಡ ಬಂದರು, ಸಿದ್ದರಾಮಯ್ಯನವರು ದೇವೇಗೌಡರಿಗೆ ಕೈಕೊಟ್ಟು ಬಂದು ಕಾಂಗ್ರೆಸ್​ನಿಂದ ಮೊದಲನೇ ಬಾರಿಗೆ ಚುನಾವಣೆಯಲ್ಲಿ ನಿಂತಾಗ ಇದೇ ವರ್ತೂರು ಪ್ರಕಾಶ್​ 1 ಕೋಟಿ ರೂ, ಹಣ ನೀಡಿದ್ದರು. ಗೆದ್ದು ಬಂದು ಲೀಡರ್​ ಆಗಲಿ ಎಂದು ಅಂತಹ ನಾಯಕರನೆಲ್ಲ ಸಿದ್ದರಾಮಯ್ಯ ನವರು ತುಳಿದರು. ಹೀಗಾಗಿ ಕುರುಬರು ಸಹ ಸೆಡ್ಡು ತೀರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಸ್ಯಾಂಟ್ರೋ ರವಿ ಒಬ್ಬ ನೀಚ:ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನವರು ಯಾರೇ ಇದ್ದರೂ ಸಹ ಅವರ ವಿರುದ್ದ ಕ್ರಮ ಜರುಗಿಸಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಒಬ್ಬ ನೀಚ. ಈಗಾಗಲೇ ಸ್ಯಾಂಟ್ರೋ ರವಿ ಬಂಧನವಾಗಿದೆ. ಆತನ ವಿರುದ್ದ ಪೊಲೀಸರು ತನಿಖೆ ನಡೆಸಿ ಕ್ರಮ ಜರುಗಿಸುತ್ತಾರೆ ಎಂದರು. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಯಾರೇ ಪ್ರಕರಣದಲ್ಲಿದ್ದರೂ ಅವರ ವಿರುದ್ಧ ಕ್ರಮ ಆಗಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

ಮಹಿಳೆಯರನ್ನು ಇಟ್ಟು ಕೊಂಡು ಆತ ಮಾಡಿರುವ ದಂಧೆಗೆ ಕ್ಷಮೆ ಇಲ್ಲ. ಇಂತಹ ವ್ಯಕ್ತಿ ಇತಿಹಾಸದಲ್ಲೇ ಮೊದಲು ಎನಿಸುತ್ತದೆ. ಈ ಪ್ರಕರಣದಲ್ಲಿ ವಿನಾಕಾರಣ ಗೃಹ ಸಚಿವರು ಸೇರಿದಂತೆ ಇತರರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಕುಮಾರಸ್ವಾಮಿ ವಿರುದ್ಧ ಕೂಡಾ ಸಾಕಷ್ಟು ಆರೋಪ ಮಾಡಬಹುದು. ಮತ್ತೊಬ್ಬರಿಗೆ ಕಳ್ಳ ಅಂತಾ ಬಿಂಬಿಸಿ, ತಾನು ಸಾಚಾ ಅಂತಾ ಬಿಂಬಿಸಿಕೊಳ್ಳುತ್ತಿದ್ಥಾರೆ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.‌ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆ ಯಾವ ರೀತಿ ಯಲ್ಲಿ ಆಗಬೇಕೆಂದು ನಿರ್ಧಾರ ಮಾಡುತ್ತದೆ ಎಂದರು.

ಇದನ್ನೂ ಓದಿ:ಈಶ್ವರಪ್ಪ ಮಹಾ ಪೆದ್ದ, ನಾಲಿಗೆಗೂ ಬ್ರೈನ್​​​ಗೂ ಲಿಂಕ್​ ತಪ್ಪೋಗಿದೆ: ಸಿದ್ದರಾಮಯ್ಯ

Last Updated : Jan 14, 2023, 8:24 PM IST

ABOUT THE AUTHOR

...view details