ಶಿವಮೊಗ್ಗ:ಪ್ರಕರಣದ ಆರೋಪ ಪಟ್ಟಿಯಲ್ಲಿ ಹೆಸರು ಕೈ ಬಿಡಲು ಲಂಚ ಪಡೆಯುವಾಗ ಅರಣ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಶಿರಾಳಕೊಪ್ಪದ ಡಿಆರ್ಎಫ್ಒ ವೀರೇಶ್, ಎಸಿಬಿ ಬಲೆಗೆ ಬಿದ್ದ ಅಧಿಕಾರಿ ಎಂದು ತಿಳಿದು ಬಂದಿದೆ.
ಡಿಆರ್ಎಫ್ಓ ವೀರೇಶ್ ಈ ಹಿಂದೆ ಸೊರಬದಲ್ಲಿ ಕಾರ್ಯನಿರ್ವಹಿಸುವಾಗ ಇಡುವಾಣಿಯಲ್ಲಿ ಅರಣ್ಯ ಕಾಯ್ದೆಯಂತೆ ವೀರೇಶ್ ಎಂಬಾತನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಆರೋಪ ಪಟ್ಟಿಯಿಂದ ವ್ಯಕ್ತಿಯ ಹೆಸರು ಕೈಬಿಡಲು ಡಿಆರ್ಎಫ್ಓ ವೀರೇಶ್ ಅವರು 10 ಸಾವಿರ ರೂ ಲಂಚ ಕೇಳಿದ್ದರು. ಇದರಲ್ಲಿ 7 ಸಾವಿರ ರೂ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.