ಶಿವಮೊಗ್ಗ: ಮಾಜಿ ಸೈನಿಕರಿಗೆ ದಿನಸಿ ಹಾಗೂ ದಿನಬಳಕೆ ವಸ್ತುಗಳು, ಮದ್ಯ ವಿತರಣೆ ಮಾಡುವ ಉದ್ದೇಶದಿಂದ ಆಯ್ದ ಜಿಲ್ಲೆಗಳಲ್ಲಿ ಮಿಲಿಟರಿ ಕ್ಯಾಂಟೀನ್ ಗಳನ್ನು ಆರಂಭಿಸಲಾಗಿದೆ. ಈ ಮಿಲಿಟರಿ ಕ್ಯಾಂಟೀನ್ಗಳು ಮಾಜಿ ಸೈನಿಕರಿಗೆ ನ್ಯಾಯಬೆಲೆ ಅಂಗಡಿಗಳ ಮಾದರಿಯಲ್ಲಿ ರಿಯಾಯಿತಿ ದರದಲ್ಲಿ ದಿನಸಿ, ಅಗತ್ಯ ವಸ್ತುಗಳು ಹಾಗೂ ಮದ್ಯ ಮಾರಾಟ ಮಾಡುತ್ತವೆ. ಆದರೆ ಶಿವಮೊಗ್ಗ ಮಿಲಿಟರಿ ಕ್ಯಾಂಟೀನ್ ಸಮರ್ಪಕವಾಗಿ ಸೇವೆ ನೀಡುತ್ತಿಲ್ಲ ಎಂದು ಆರೋಪಿಸಿ ಮಿಲಿಟರಿ ಕ್ಯಾಂಟೀನ್ ಎದುರು ಮಾಜಿ ಸೈನಿಕರು ಪ್ರತಿಭಟನೆ ನಡೆಸಿದ್ದಾರೆ.
ಸರಿಯಾಗಿ ಕಾರ್ಯ ನಿರ್ವಹಿಸದ ಮಿಲಿಟರಿ ಕ್ಯಾಂಟೀನ್: ಮಾಜಿ ಸೈನಿಕರ ಪ್ರತಿಭಟನೆ! - ಶಿವಮೊಗ್ಗ ಲೇಟೆಸ್ಟ್ ನ್ಯೂಸ್
ಸಿಎಸ್ಡಿ ಕಾರ್ಡ್ ಹೊಂದಿರುವ ಮಾಜಿ ಸೈನಿಕರಿಗೆ ದಿನಸಿ, ಅಗತ್ಯ ವಸ್ತುಗಳು ಹಾಗೂ ಮದ್ಯವನ್ನು ಸರಬರಾಜು ಮಾಡಬೇಕು. ಆದರೆ, ಶಿವಮೊಗ್ಗದ ಮಿಲಿಟರಿ ಕ್ಯಾಂಟೀನ್ನಲ್ಲಿ ಪ್ರತಿ ತಿಂಗಳು ದಿನಸಿ, ಮದ್ಯ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಮಾಜಿ ಸೈನಿಕರು ಮಿಲಿಟರಿ ಕ್ಯಾಂಟೀನ್ ಎದುರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಗೊಳಪಟ್ಟಂತೆ ಶಿವಮೊಗ್ಗದ ಹಳೆ ಬಸ್ ನಿಲ್ದಾಣದ ಬಳಿ ಮಿಲಿಟರಿ ಕ್ಯಾಂಟೀನ್ ಆರಂಭಿಸಲಾಗಿದೆ. ಇಲ್ಲಿ ಪ್ರತಿ ತಿಂಗಳು ಈ ಎರಡು ಜಿಲ್ಲೆ ವ್ಯಾಪ್ತಿಯಲ್ಲಿರುವ ಸಿಎಸ್ಡಿ ಕಾರ್ಡ್ ಹೊಂದಿರುವ ಮಾಜಿ ಸೈನಿಕರಿಗೆ ದಿನಸಿ, ಅಗತ್ಯ ವಸ್ತುಗಳು ಹಾಗೂ ಮದ್ಯ ಸರಬರಾಜು ಮಾಡಬೇಕು. ಆದರೆ, ಶಿವಮೊಗ್ಗದ ಮಿಲಿಟರಿ ಕ್ಯಾಂಟೀನ್ನಲ್ಲಿ ಪ್ರತಿ ತಿಂಗಳು ದಿನಸಿ, ಮದ್ಯ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಮಾಜಿ ಸೈನಿಕರು ಮಿಲಿಟರಿ ಕ್ಯಾಂಟೀನ್ ಎದುರು ಪ್ರತಿಭಟನೆ ನಡೆಸಿದರು.
ಈ ವ್ಯಾಪ್ತಿಯಲ್ಲಿ 600 ಮಂದಿ ಸಿಎಸ್ ಡಿ ಕಾರ್ಡ್ ಹೊಂದಿರುವ ಮಾಜಿ ಸೈನಿಕರಿದ್ದಾರೆ. ಆದರೆ, ಮಿಲಿಟರಿ ಕ್ಯಾಂಟೀನ್ ನವರು ಅವರಿಗೆ ಇಷ್ಟ ಬಂದಾಗ ಒಂದೆರಡು ದಿನ ಕ್ಯಾಂಟೀನ್ ಓಪನ್ ಮಾಡಿ ಕೆಲವೇ ಜನರಿಗೆ ದಿನಸಿ ಹಾಗೂ ಮದ್ಯ ವಿತರಣೆ ಮಾಡುತ್ತಿದ್ದಾರೆ. ಇನ್ನುಳಿದ ಮಾಜಿ ಸೈನಿಕರಿಗೆ ಪ್ರತಿ ತಿಂಗಳು ಅನ್ಯಾಯವಾಗುತ್ತಿದೆ.
ಇದೀಗ ಶಿವಮೊಗ್ಗದಲ್ಲಿ ನಾವು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಇನ್ನು ಮೂರು ದಿನಗಳ ಕಾಲ ದಿನಸಿ ಹಾಗೂ ಮದ್ಯ ವಿತರಿಸುವುದಾಗಿ ಹೇಳುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಇದೇ ರೀತಿಯ ಸಮಸ್ಯೆ ಮಾಡುತ್ತಿದ್ದಾರೆ ಎಂದು ಮಾಜಿ ಸೈನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.