ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದ ಬಳಿ ಕಾಡಾನೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ವಾರ್ಡ್ ನಂಬರ್ 14 ಕುರುವಳ್ಳಿ ಬಳಿ ಬೆಳಗಿನ ಜಾವ ಕಾಡಾನೆ ಕಾಣಿಸಿಕೊಂಡಿದೆ. ಇಂದು ಕಾಡಾನೆ ಕುರುವಳ್ಳಿಗೆ ಬಂದಿರುವುದು ಇಲ್ಲಿನ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತೀರ್ಥಹಳ್ಳಿ ಪಟ್ಟಣದ ಬಳಿ ಕಾಣಿಸಿಕೊಂಡ ಕಾಡಾನೆ: ಭಯಭೀತರಾದ ಜನತೆ
ತೀರ್ಥಹಳ್ಳಿಯಲ್ಲಿ ಕಾಡಾನೆ ಪತ್ತೆ - ಸಿಸಿಟಿವಿಯಲ್ಲಿ ಸೆರೆಯಾಯ್ತು ಚಲನವಲನ - ಆನೆ ಹುಟುಕಾಟಕ್ಕೆ ಮುಂದಾದ ಅರಣ್ಯ ಇಲಾಖೆ
elephant-appeared-near-the-town-of-tirthahalli
ಕಳೆದ ಎರಡು ದಿನಗಳ ಹಿಂದೆ ತೀರ್ಥಹಳ್ಳಿ ತಾಲೂಕು ಶೇಡ್ಗಾರ್, ಕಟ್ಟೆಹಕ್ಲು ಸಮೀಪ ಕಾಣಿಸಿಕೊಂಡಿತ್ತು. ರಾಷ್ಟ್ರೀಯ ಹೆದ್ದಾರಿ 169 ತೀರ್ಥಹಳ್ಳಿ - ಕೊಪ್ಪ- ಶೃಂಗೇರಿ ಮಾರ್ಗದಲ್ಲಿರುವ ಕುರುವಳ್ಳಿಯ ಮುಖ್ಯ ರಸ್ತೆಯಲ್ಲಿ ಓಡಾಡಿದ್ದು, ಅಲ್ಲಿನ ಅಂಗಡಿ ಬೋರ್ಡ್ ಅನ್ನು ಪುಡಿ ಮಾಡಿದೆ. ಕಾಡಾನೆ ಬಂದು ಹೋದ ಹೆಜ್ಜೆ ಗುರುತು ಪತ್ತೆಯಾಗಿದೆ. ಸದ್ಯ ಅರಣ್ಯ ಇಲಾಖೆ ಕಾಡಾನೆ ಹುಡುಕಾಟದಲ್ಲಿದೆ.
ಇದನ್ನೂ ಓದಿ: ಉಳ್ಳಾಲ: ಚರಂಡಿಯಲ್ಲಿ ಸೆಕ್ಯುರಿಟಿ ಗಾರ್ಡ್ ಶವ ಪತ್ತೆ