ಶಿವಮೊಗ್ಗ:ಹಂಸಲೇಖ ಅವರ ಹೇಳಿಕೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (Karnataka Dalit Sangharsh Committee) ಸಮರ್ಥನೆ ಮಾಡಿಕೊಳ್ಳುತ್ತದೆ. ಅವರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು, ಭಯಪಡಬಾರದು ಎಂದು ಡಿಎಸ್ಎಸ್ ರಾಜ್ಯ ಮುಖಂಡ ಎಂ.ಗುರುಮೂರ್ತಿ (DSS state leader M. Gurumoorthy) ಹೇಳಿದರು.
ಇಂದು ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಜಾತಿವಾದಿಗಳು ಜಾಲತಾಣಗಳ ಮೂಲಕ ಹಂಸಲೇಖ ವಿಚಾರವನ್ನು ಟ್ರೋಲ್ ಮಾಡುತ್ತಿದ್ದಾರೆ. ದೇಶದಲ್ಲಿ ಶೇ 3ರಷ್ಟಿರುವ ಮನುವಾದಿಗಳು ಹಂಸಲೇಖ ಅವರನ್ನು ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿದ್ದಾರೆ ಆದರೆ, ಶೇ 85ರಷ್ಟಿರುವ ಜನರು ಪ್ರತಿಭಟಿಸುವಲ್ಲಿ ಸೋತಿದ್ದೇವೆ ಎಂದರು.
ದಲಿತ ಪರವಾಗಿ ಧ್ವನಿ ಎತ್ತುವ ಜನರ ಧ್ವನಿ ಅಡಗಿಸುವ ಕೆಲಸವನ್ನು ಶೇ 3%ರಷ್ಟು ಜನ ಮಾಡ್ತಿದ್ದಾರೆ. ದಲಿತರ ಪರವಾಗಿದ್ದ ಬಸವಣ್ಣ, ಬುದ್ದ, ಕಲ್ಬುರ್ಗಿ, ಗೌರಿಯವರ ಧ್ವನಿ ಅಡಗಿಸುವ ಕೆಲಸ ಮಾಡಿದ್ದಾರೆ. ದಲಿತರು ಎಷ್ಟೇ ವಿರೋಧ ಮಾಡಿದರೂ ಯಾರೂ ತಲೆಕೆಡಿಸಿಕೊಳ್ಳಲ್ಲ. ಇದೇ ಕಾರಣಕ್ಕೆ ಹಂಸಲೇಖ ಅವರು ಡೆಮಾಕ್ರಸಿ ಹೋಗಿ ಧರ್ಮಾಕ್ರಸಿ ಬರುತ್ತಿದೆ ಎಂದಿದ್ದಾರೆ ಎಂದು ಹೇಳಿದರು.
ಈಗ ಅದೇ ಕಾರಣಕ್ಕಾಗಿ ಹಂಸಲೇಖರ ಧ್ವನಿ ಅಡಗಿಸುವ ಕೆಲಸ ನಡೆಯುತ್ತಿದೆ. ಸಂವಿಧಾನ ಕಾಪಾಡುವ ಎಚ್ಚರದ ಹೆಜ್ಜೆ ಇಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಪುನೀತ್ ರಾಜಕುಮಾರ್ಗೆ 'ಕರ್ನಾಟಕ ರತ್ನ': ಕನ್ನಡ ಇರುವಷ್ಟು ದಿನ ಅಪ್ಪು ಇರುತ್ತಾರೆ.. ಹೆಚ್ಡಿಕೆ