ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೊರೊನಾದಿಂದ ಶೀಘ್ರವಾಗಿ ಗುಣಮುಖರಾಗಲಿ ಎಂದು ಶಿವಮೊಗ್ಗ ಜಿಲ್ಲಾ ಎನ್ಎಸ್ಯುಐನಿಂದ ವಿಶೇಷ ಪೂಜೆ ನಡೆಸಲಾಯಿತು.
ಕೊರೊನಾದಿಂದ ಡಿಕೆಶಿ ಶೀಘ್ರ ಗುಣಮುಖರಾಗಲಿ: ಎನ್ಎಸ್ಯುಐನಿಂದ ವಿಶೇಷ ಪೂಜೆ - NSUI
ಡಿ.ಕೆ.ಶಿವಕುಮಾರ್ ಅವರು ಕೊರೊನಾದಿಂದ ಶೀಘ್ರವಾಗಿ ಗುಣಮುಖರಾಗಲಿ ಎಂದು ಶಿವಮೊಗ್ಗ ಜಿಲ್ಲಾ ಎನ್ಎಸ್ಯುಐನಿಂದ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಎನ್ಎಸ್ಯುಐನಿಂದ ವಿಶೇಷ ಪೂಜೆ
ನಗರದ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಇರುವ ಎಲ್ಲ ವಿಘ್ಞಗಳು ನಿವಾರಣೆ ಆಗಲಿ ಎಂದು ಪೂಜೆ ಸಲ್ಲಿಸಲಾಯಿತು.
ಕೊರೊನಾ ಪ್ರಾರಂಭವಾದಗಿನಿಂದ ಸಹ ಜನರ ಜೊತೆ ನಿಂತು ಕೊರೊನಾ ವಿರುದ್ದ ಹೋರಾಟ ನಡೆಸಿದ್ದಾರೆ. ಸಂಕಷ್ಟದಲ್ಲಿ ಇದ್ದವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಕೋವಿಡ್ ವಿಚಾರದಲ್ಲಿ ಸರ್ಕಾರದ ವಿರುದ್ದ ಚಾಟಿ ಬೀಸಿದ್ದಾರೆ. ಇಂತಹ ಜನ ನಾಯಕನಿಗೆ ಶೀಘ್ರ ಕೊರೊನಾ ದೂರವಾಗಲಿ ಎಂದು ಹಾರೈಸಿ ಪೂಜೆ ಸಲ್ಲಿಸಿದರು.