ಶಿವಮೊಗ್ಗ: ಸರ್ಕಾರಿ ಜಾಗ ಒತ್ತುವರಿಯನ್ನು ಖಂಡಿಸಿ ಸಾಗರದ ಎಸಿ ಕಚೇರಿ ಮುಂದೆ ಮಂಜುನಾಥ್ ಎಂಬುವರು ಏಕಾಂಗಿಯಾಗಿ ಹೋರಾಟ ನಡೆಸಿದ್ದಾರೆ.
ಸರ್ಕಾರಿ ಜಾಗ ಒತ್ತುವರಿ ಖಂಡಿಸಿ ಸಾಗರ ಎಸಿ ಕಚೇರಿ ಮುಂದೆ ವ್ಯಕ್ತಿಯ ಏಕಾಂಗಿ ಹೋರಾಟ - ಸಾಗರ ತಾಲೂಕಿನ ಬಳಸಗೋಡು ಗ್ರಾಮ
ಸಾಗರ ತಾಲೂಕಿನ ಬಳಸಗೋಡು ಗ್ರಾಮದಲ್ಲಿನ ಸರ್ಕಾರಿ ಜಾಗ ಒತ್ತುವರಿಯನ್ನು ಖಂಡಿಸಿ ವ್ಯಕ್ತಿಯೊಬ್ಬರು ಎಸಿ ಕಚೇರಿಯ ಮುಂದೆ ಚಾಪೆಯಲ್ಲಿ ಮಲಗಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ
ಎಸಿ ಕಚೇರಿಯ ಮುಂದೆ ಚಾಪೆಯಲ್ಲಿ ಮಲಗಿ ವಿಭಿನ್ನವಾಗಿ ಪ್ರತಿಭಟನೆ
ಸಾಗರ ತಾಲೂಕಿನ ಬಳಸಗೋಡು ಗ್ರಾಮದಲ್ಲಿ 10 ಎಕರೆ ಸರ್ಕಾರಿ ಜಾಗವನ್ನು ಕಬಳಿಸಿಕೊಂಡು ಮನೆ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ತಿಳಿದಿದ್ದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ಇದರಿಂದ ತಕ್ಷಣ ಸಾಗರದ ಉಪ ವಿಭಾಗಾಧಿಕಾರಿ ಸರ್ಕಾರಿ ಜಾಗವನ್ನು ತೆರವು ಮಾಡಿ ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಎಸಿ ಕಚೇರಿಯ ಮುಂದೆ ಚಾಪೆಯಲ್ಲಿ ಮಲಗಿ ಒತ್ತಾಯಿಸಿದರು.
ಎಸಿಯವರು ಒಂದು ವಾರದ ಸಮಯವಕಾಶ ಕೇಳಿದ ಹಿನ್ನೆಲೆ ಮಂಜುನಾಥ್ ತಮ್ಮ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.