ಕರ್ನಾಟಕ

karnataka

By

Published : Mar 30, 2021, 2:40 PM IST

ETV Bharat / state

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್​ಗೆ ಪುನರ್ವಸತಿ ನೀಡಿ, ಮುಖ್ಯವಾಹಿನಿಗೆ ತರಬೇಕು : ಅಪರ ಜಿಲ್ಲಾಧಿಕಾರಿ

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್​ಗಳ ನೇಮಕಾತಿ ಸಂಪೂರ್ಣ ನಿಷೇಧಿಸಬೇಕು. ಮ್ಯಾನ್ಯುಯಲ್ ಸ್ಕ್ಯಾವೆಂಜರ್ ವೃತ್ತಿಯಲ್ಲಿ ತೊಡಗಿರುವವರನ್ನು ಗುರುತಿಸಿ, ಅವರನ್ನು ಆ ವೃತ್ತಿಯಿಂದ ಮುಕ್ತಗೊಳಿಸಬೇಕು..

Deputy District Collector Anuradha
ಅಪರ ಜಿಲ್ಲಾಧಿಕಾರಿ ಅನುರಾಧ

ಶಿವಮೊಗ್ಗ :ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್​ಗೆ ಪುನರ್ವಸತಿ ಸೌಲಭ್ಯ ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಶೀಘ್ರವೇ ಜಾರಿಗೊಳ್ಳಬೇಕು ಎಂದು ಅನುರಾಧ ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್​ಗೆ ಪುನರ್ವಸತಿ ನೀಡಿ, ಮುಖ್ಯವಾಹಿನಿಗೆ ತರಬೇಕು..

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಾಭಿವೃದ್ಧಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಾ. ಬಿ ಆರ್‌ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷೆ ನಡೆಸುತ್ತಿರುವ ಕುರಿತು ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಬದಲಾಗಿ ಮಿಷನ್‍ಗಳ ಸಹಾಯದಿಂದಲೇ ಶೌಚಾಲಯ, ತೆರೆದ ಗುಂಡಿಗಳು ಮತ್ತು ಒಳ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಇದರಿಂದ ದುರ್ಘಟನೆಗಳು ನಡೆಯುವುದನ್ನು ತಡೆಯಬಹುದು ಮತ್ತು ಜಾಡಮಾಲಿಗಳನ್ನು ಈ ವೃತ್ತಿಯಿಂದ ಮುಕ್ತಗೊಳಿಸಬಹುದು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್​ಗಳ ನೇಮಕಾತಿ ಸಂಪೂರ್ಣ ನಿಷೇಧಿಸಬೇಕು. ಮ್ಯಾನ್ಯುಯಲ್ ಸ್ಕ್ಯಾವೆಂಜರ್ ವೃತ್ತಿಯಲ್ಲಿ ತೊಡಗಿರುವವರನ್ನು ಗುರುತಿಸಿ, ಅವರನ್ನು ಆ ವೃತ್ತಿಯಿಂದ ಮುಕ್ತಗೊಳಿಸಬೇಕು.

ಬಳಿಕ ಸರ್ಕಾರದಿಂದ ನಿಗದಿಗೊಳಿಸಿದ ವಸತಿ ಸೌಲಭ್ಯ, ಶಿಕ್ಷಣ ಸೇರಿ ಇತರೆ ಪುನರ್ವಸತಿ ಸೌಲಭ್ಯಗಳನ್ನು ನೀಡಿ, ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಶೀಘ್ರ ಜಾರಿಗೊಳ್ಳಬೇಕು ಎಂದರು.

ಓದಿ:ಸರ್ಕಾರದ ಆದೇಶ ಧಿಕ್ಕರಿಸಿ ತರಗತಿ ನಡೆಸುತ್ತಿರುವ ಶಾಲೆ: ಡಿಡಿಪಿಐಯಿಂದ ಖಡಕ್​ ನೋಟಿಸ್​

ABOUT THE AUTHOR

...view details