ಕರ್ನಾಟಕ

karnataka

ಸಿಗಂದೂರು ದೇವಸ್ಥಾನ ವಿವಾದ: ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸುವಂತೆ ಮನವಿ

By

Published : Oct 19, 2020, 2:00 PM IST

ಶಿವಮೊಗ್ಗದ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಅರ್ಚಕರು ಮತ್ತು ಧರ್ಮದರ್ಶಿಗಳ ನಡುವೆ ಕಲಹ ಹಿನ್ನೆಲೆ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸುವಂತೆ ಮಾನವ ಹಕ್ಕುಗಳ ಕಮಿಟಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

siganduru temple under Muzrai Department
ಮಾನವ ಹಕ್ಕುಗಳ ಕಮಿಟಿ ಜಿಲ್ಲಾಧಿಕಾರಿಗಳಿಗೆ ಮನವಿ

ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಕಮಿಟಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಮಾನವ ಹಕ್ಕುಗಳ ಕಮಿಟಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳವಾದ ಸಿಗಂದೂರಿನಲ್ಲಿ ಅರ್ಚಕರು ಮತ್ತು ಧರ್ಮದರ್ಶಿಗಳ ನಡುವಿನ ಜಗಳದಿಂದಾಗಿ ಕೈ ಕೈ ಮಿಲಾಯಿಸಿರುವುದು ಭಕ್ತರಲ್ಲಿ ಆತಂಕ ಸೃಷ್ಟಿ ಮಾಡಿದೆ. ಹಾಗೆಯೇ ಅರ್ಚಕರು ಮತ್ತು ಧರ್ಮದರ್ಶಿಗಳ ಸಂಘರ್ಷದಿಂದಾಗಿ ದೇವಸ್ಥಾನಕ್ಕೆ ಕೆಟ್ಟ ಹೆಸರು ಬರುತ್ತದೆ ಹಾಗೂ ಈ ಘಟನೆಯಿಂದಾಗಿ ಭಕ್ತರು ಮತ್ತು ಸ್ಥಳೀಯರಿಗೆ ಮುಜುಗರ ಉಂಟಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿಗಳು ಪವಿತ್ರ ಧಾರ್ಮಿಕ ಸ್ಥಳ ಸಿಗಂದೂರನ್ನು ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳಬೇಕು ಹಾಗೂ ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ABOUT THE AUTHOR

...view details