ಶಿವಮೊಗ್ಗ: ಜಿಲ್ಲೆಯಲ್ಲಿ ವರುಣ ಆರ್ಭಟ ಹೆಚ್ಚಾಗಿದ್ದು, ಪ್ರವಾಹದ ಮುನ್ಸೂಚನೆ ಇರುವ ಕಾರಣ, ಭದ್ರಾ ಜಲಾಶಯವನ್ನು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ವೀಕ್ಷಿಸಿದರು.
ಭದ್ರಾ ಡ್ಯಾಂ ವೀಕ್ಷಿಸಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ಭದ್ರಾ ಅಣೆಕಟ್ಟೆಗೆ ಭೇಟಿ ನೀಡಿ, ಪರಿಶೀಲಿಸಿದ ಡಿಸಿ, ಅಣೆಕಟ್ಟೆಯ ಒಳಹರಿವು, ಹೊರ ಹರಿವಿನ ಬಗ್ಗೆ ಮಾಹಿತಿ ಪಡೆದುಕೊಂಡರು.
ಎಷ್ಟು ಪ್ರಮಾಣದಲ್ಲಿ ನೀರು ಬಿಡುವುದರಿಂದ ನದಿ ಭಾಗದಲ್ಲಿ ಪ್ರವಾಹ ಉಂಟಾಗುತ್ತದೆ ಎಂಬ ಮಾಹಿತಿಯನ್ನು ಎಂಜಿನಿಯರ್ಗಳಿಂದ ಸಂಗ್ರಹಿಸಿದರು. ಜೊತೆಗೆ ಭದ್ರಾವತಿ ತಹಶೀಲ್ದಾರ್ ನಾಗರಾಜ್ರವರಿಂದಲೂ ಸಹ ಮಾಹಿತಿ ಪಡೆದರು.
ಇಲ್ಲಿನ ಭದ್ರಾವತಿಯ ಹೊಸ ಸೇತುವೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ರವರ ಜೊತೆಗೆ ಭೇಟಿ ನೀಡಿದರು. ಭದ್ರಾ ಅಣೆಕಟ್ಟೆ ನೀರು ಬಿಡುವುದರಿಂದ ಹೊಸ ಸೇತುವೆ ಮುಳುಗಿ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್, ನಗರಸಭೆ ಆಯುಕ್ತರ ಜೊತೆ ಸಮಾಲೋಚನೆ ನಡೆಸಿದರು.