ಶಿವಮೊಗ್ಗ:ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ತೀರ್ಥಹಳ್ಳಿ ತಾಲೂಕಿನ ರೈತನ ಮಗಳು ಅನ್ವಿತಾ ವಾಣಿಜ್ಯ ವಿಭಾಗದಲ್ಲಿ 2ನೇ ರ್ಯಾಂಕ್ ಸಾಧನೆ ಮಾಡಿದ್ದಾರೆ.
ಟಾಪರ್ ಅನ್ವಿತಾಗೆ ಅಭಿನಂದನೆ:ಮಲ್ಲೇಸರದ ರೈತ ನಾಗರಾಜ್ ಹಾಗೂ ಅನುಸೂಯ ದಂಪತಿಯ ಮಗಳು ಅನ್ವಿತಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಶಿವಮೊಗ್ಗದ ಪ್ರಸಿದ್ಧ ವಿಕಾಸ ಕಾಂಪೊಸಿಟ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಮಗಳ ಸಾಧನೆಗೆ ಕುಟುಂಬಸ್ಥರು ಹಾಗೂ ಕಾಲೇಜಿನವರು ಅಭಿನಂದನೆ ಸಲ್ಲಿಸಿದ್ದಾರೆ. ಅನ್ವಿತಾ 600 ಅಂಕಗಳಿಗೆ 597 ಅಂಕಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ:ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರೇ ಟಾಪರ್ಸ್!
ಅದೇ ರೀತಿ, ಶಿವಮೊಗ್ಗದ ಕುವೆಂಪು ಬಡಾವಣೆಯ ವಿದ್ಯಾಭಾರತಿ ಪಿಯು ಕಾಲೇಜಿನ ನೇಹಶ್ರೀ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 596 ಅಂಕಗಳನ್ನು ಗಳಿಸಿದ್ದಾರೆ. ತಾಯಿ ಶಿಕ್ಷಕಿ, ತಂದೆ ಎಫ್ಡಿಸಿ ಆಗಿ ಕೆಲಸ ಮಾಡುತ್ತಿದ್ದಾರೆ. ಸಹೋದರಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೇಹಶ್ರೀ ಸಾಧನೆಗೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು. ಉಪನ್ಯಾಸಕರು ವಿದ್ಯಾರ್ಥಿನಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು.