ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿರುವ ಗೀತಾ ತಮ್ಮ ಒಂದು ತಿಂಗಳ ವೇತನವನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ ನೀಡಿ ಮಾದರಿಯಾಗಿದ್ದಾರೆ.
ಕೋವಿಡ್-19 ಪರಿಹಾರ ನಿಧಿಗೆ ತಿಂಗಳ ವೇತನ ನೀಡಿದ ಶುಶ್ರೂಷಕಿ - corona Relief Fund in shivamogg
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಶುಶ್ರೂಷಕಿ ಗೀತಾ ಎಂಬುವವರು ತಮ್ಮ ತಿಂಗಳ ವೇತನ ಹಾಗೂ ಪತಿಯ ಪಿಂಚಣಿಯನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾರೆ.
ಕೋವಿಡ್-19 ಪರಿಹಾರ ನಿಧಿಗೆ ಶೂಶ್ರುಷಕಿ ತಿಂಗಳ ವೇತನ
ತಮ್ಮ 1 ತಿಂಗಳ ವೇತನ 51 ಸಾವಿರ ರೂಪಾಯಿಯ ಜೊತೆ ಪತಿಯ ನಿವೃತ್ತಿ ವೇತನ 13 ಸಾವಿರ ರೂಪಾಯಿಗಳನ್ನು ಅವರು ನೀಡಿ ಮಾನವೀಯತೆ ಮೆರೆದಿದ್ದಾರೆ.
ತೀರ್ಥಹಳ್ಳಿಯಲ್ಲಿ ಶಾಸಕ ಅರಗ ಜ್ಞಾನೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಣ ಸಿ.ಎಸ್.ಷಡಕ್ಷರಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಚೆಕ್ ನೀಡಿದರು.