ಕರ್ನಾಟಕ

karnataka

ETV Bharat / state

ಸಮಸ್ಯೆ ಬಗೆಹರಿಸಬೇಕಾದವರೇ ಪ್ರತಿಭಟನೆಗಿಳಿದರೆ....? ಹೀಗಾಗಿದ್ದು ಈ ನಗರ ಪಾಲಿಕೆಯಲ್ಲಿ!  ​

ಶಿವಮೊಗ್ಗ ನಗರ ಪಾಲಿಕೆ ಮುಂಭಾಗ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕಾರ್ಪೊರೇಟರ್​ಗಳು ಪ್ರತಿಭಟನೆಗೆ ಕುಳಿತಿರುವ ಘಟನೆ ನಡೆದಿದೆ. ಮಹಾನಗರ ಪಾಲಿಕೆ ಸದಸ್ಯರುಗಳೇ ಹೀಗೆ ಖಾಲಿ ಕೊಡ ಪ್ರದರ್ಶನ ಮಾಡೋ ಮೂಲಕ ಪ್ರತಿಭಟನೆಗಿಳಿದಿರುವುದು ಸಾರ್ವಜನಿಕರಲ್ಲಿ ನಗೆಪಾಟಲಿಗೀಡಾಗಿದೆ.

ನೀರಿಗಾಗಿ ಪ್ರತಿಭಟನೆ ನಡೆಸಿದ ಶಿವಮೊಗ್ಗ ಕಾರ್ಪೋರೇಟರ್ಸ್

By

Published : Jun 6, 2019, 5:44 PM IST

ಶಿವಮೊಗ್ಗ : ನಗರದಲ್ಲಿ ಕುಡಿವ ನೀರಿನ ಸಮಸ್ಯೆ ವಿಪರೀತವಾಗಿದ್ದು, ಸಮಸ್ಯೆ ನಿವಾರಿಸಿಸುವ ಕಾರ್ಪೊರೇಟರ್​ಗಳೇ ನೀರಿಗಾಗಿ ಪ್ರತಿಭಟನೆಯ ನಡೆಸಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಖಾಲಿ ಕೊಡ ಇಟ್ಟುಕೊಂಡು ನಗರದ ವಿವಿಧ ಬಡಾವಣೆಯ ನಿವಾಸಿಗಳು ನೀರಿಗಾಗಿ ಪ್ರತಿಭಟನೆ ನಡೆಸೋದು ಕಾಮನ್. ಆದ್ರೆ, ಜನರಿಗೆ ನೀರು ಕೊಡಬೇಕಾದ ಕಾರ್ಪೋರೇಟರ್​ಗಳೇ ಅಸಹಾಯಕರಾಗಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನ ಪಾಲಿಕೆ ಸದಸ್ಯರು ನೀರಿಗಾಗಿ ಪ್ರತಿಭಟನೆ ನಡೆಸುವ ಮೂಲಕ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಸಮರ ಸಾರಿದ್ದಾರೆ. ಅಲ್ಲದೇ, ಆಡಳಿತ ಪಕ್ಷದ ಬಿಜೆಪಿಯ ಮೇಯರ್, ಉಪಮೇಯರ್ ಹಾಗೂ ಸದಸ್ಯರು ಈವರೆಗೆ ಸಭೆ ಕರೆದಿಲ್ಲ ಎಂದು ಆರೋಪವನ್ನು ಮಾಡಿದ್ದಾರೆ. ನಗರದಲ್ಲಿ ಈಗಾಗಲೇ ನೀರಿನ ಅಭಾವವಿದ್ದು, ಇದನ್ನು ಸದಸ್ಯರೆಲ್ಲರೂ ಒಗ್ಗೂಡಿ ಸಮಸ್ಯೆ ಬಗೆಹರಿಸಿ, ನಗರದ ನಾಗರಿಕರಿಗೆ ನೀರು ಪೂರೈಕೆ ಮಾಡೋದನ್ನ ಬಿಟ್ಟು ಹೀಗೆ ಪ್ರತಿಭಟನೆ ಹಾದಿ ಹಿಡಿದಿರೋದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ.

ನೀರಿಗಾಗಿ ಪ್ರತಿಭಟನೆ ನಡೆಸಿದ ಶಿವಮೊಗ್ಗ ಕಾರ್ಪೋರೇಟರ್ಸ್

ಒಟ್ಟಾರೆ, ಮಹಾನಗರ ಪಾಲಿಕೆ ಸದಸ್ಯರುಗಳೇ ಹೀಗೆ ಖಾಲಿ ಕೊಡ ಪ್ರದರ್ಶನ ಮಾಡೋ ಮೂಲಕ ಪ್ರತಿಭಟನೆಗಿಳಿದಿರುವುದು ಸಾರ್ವಜನಿಕರಲ್ಲಿ ನಗೆಪಾಟಲಿಗೀಡಾಗಿರುವುದಂತೂ ಸತ್ಯ

ABOUT THE AUTHOR

...view details