ಶಿವಮೊಗ್ಗ :ನರ್ಸ್ವೊಬ್ಬರು 9 ತಿಂಗಳ ಗರ್ಭಿಣಿಯಾಗಿದ್ದರೂ ಸಹ ಕರ್ತವ್ಯ ನಿರ್ವಹಿಸುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ರೂಪ ಎಂಬ ನರ್ಸ್ ಕಳೆದ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಈಗ 9 ತಿಂಗಳ ಗರ್ಭಿಣಿಯಾಗಿದ್ದಾರೆ. ಆದರೂ ಸಹ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ಕೊರೊನಾ ಡ್ಯೂಟಿಯಲ್ಲಿರುವತುಂಬು ಗರ್ಭಿಣಿ ಈ ನರ್ಸ್.. ಇದನ್ನೂ ಓದಿ..;ತುಂಬು ಗರ್ಭಿಣಿ ನಿತ್ಯ 120 ಕಿ.ಮೀ ಪ್ರಯಾಣಿಸಿ ಕರ್ತವ್ಯ... ಈ ಕೊರೊನಾ ವಾರಿಯರ್ಗೆ ಸಿಎಂ ಹೀಗಂದರು..
ಇವರು ಶಿವಮೊಗ್ಗ ತಾಲೂಕು ಗಾಜನೂರಿನಲ್ಲಿ ವಾಸವಾಗಿದ್ದಾರೆ. ಪ್ರತಿದಿನದ ಗಾಜನೂರಿನಿಂದ ತೀರ್ಥಹಳ್ಳಿಗೆ ಓಡಾಡುವ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.