ಶಿವಮೊಗ್ಗ: ಶಿಕಾರಿಪುರ ಪುರಸಭೆ ಚುನಾವಣೆಯಲ್ಲಿ ಬಹುಮತ ಪಡೆಯದೆ ಇದ್ದರೂ ಸಹ ಬಿಜೆಪಿ ಆಪರೇಷನ್ ಕಮಲ ನಡೆಸಿ, ಅಧಿಕಾರದ ಗದ್ದುಗೆ ಏರಿದ ಬಿಜೆಪಿ ನಡೆಯನ್ನು ಖಂಡಿಸಿ, ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದ್ದಾರೆ.
ಪುರಸಭೆಯಲ್ಲಿ ಬಿಜೆಪಿಯ ಸದಸ್ಯರೊಂದಿಗೆ ಸಂಸದ ರಾಘವೇಂದ್ರ ಆಗಮಿಸುತ್ತಿದ್ದಂತಯೇ ಧಿಕ್ಕಾರ ಕೂಗಿದರು. ಪುರಸಭೆಯ ಚುನಾವಣೆ ಮುಗಿದ ನಂತರ ಬಿಜೆಪಿಗೆ ಧಿಕ್ಕಾರ ಹಾಕುತ್ತಾ ಹೊರ ನಡೆದಿರುವ ಘಟನೆ ಸಹ ನಡೆದಿದೆ.