ಕರ್ನಾಟಕ

karnataka

By

Published : Mar 14, 2020, 1:09 PM IST

ETV Bharat / state

ಮಾಹಿತಿ ನೀಡದೇ ಕಟ್ಟಡ ತೆರವು: ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ

ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ತಮಗೆ ಪೂರ್ವ ಮಾಹಿತಿ ನೀಡದೇ ಪ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್​​ ಆಸ್ಪತ್ರೆಗೆ ಸೇರಿರುವ ಕಟ್ಟಡಗಳನ್ನ ತೆರವುಗೊಳಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಪ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್​ ಆಫ್ ಇಂಡಿಯಾದವರು ಮನವಿ ಮಾಡಿದ್ಧಾರೆ.

Clearing the building without informing: Appeal to District Collector
ಮಾಹಿತಿ ನೀಡದೆ ಕಟ್ಟಡ ತೆರವು

ಶಿವಮೊಗ್ಗ:ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ಪೂರ್ವ ಮಾಹಿತಿ ನೀಡದೇ ಕಟ್ಟಡವನ್ನು ಏಕಾಏಕಿ ಕೆಡವಿರುವುದರಿಂದ ಪ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್​ ಆಫ್ ಇಂಡಿಯಾಗೆ 15 ಲಕ್ಷ ರೂ. ನಷ್ಟ ಉಂಟಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಪ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್​ ಆಫ್ ಇಂಡಿಯಾ ವತಿಯಿಂದ ಮನವಿ ಸಲ್ಲಿಸಲಾಗಿದೆ.

ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿಸಿ, ಪೂರ್ವ ಮಾಹಿತಿ ನೀಡದೇ ಆಸ್ಪತ್ರೆಯ ಬಾತ್ ರೂಂ, ಟಾಯ್ಲೆಟ್, ಕಾರ್ ಶೆಡ್​​ಗಳನ್ನು ಏಕಾಏಕಿ ಕೆಡವಲಾಗಿದೆ. ಕೂಡಲೇ ಕಟ್ಟಡಗಳನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು ಎಂದು ಅಸೋಸಿಯೇಷನ್​ನವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಎಸ್.ಬಿ.ಆಶೋಕ್ ಕುಮಾರ್, ಪುಷ್ಪ ಎಸ್.ಶೆಟ್ಟಿ, ರಮೇಶ್ ಬಾಬು ಮತ್ತಿತರರು ಇದ್ದರು.

For All Latest Updates

TAGGED:

ABOUT THE AUTHOR

...view details