ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಬಾಲ್ಯ ವಿವಾಹ: ಪೊಲೀಸರ ಅತಿಥಿಯಾದ ಪೋಷಕರು

ಬಾಲ್ಯ ವಿವಾಹ ಮಾಡಿದ ಬಾಲಕಿಯ‌ ಪೋಷಕರು. ಮದುವೆಯಾದ ಯುವಕ ಮತ್ತು ಆತನ ಪೋಷಕರನ್ನು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಬಾಲ್ಯ ವಿವಾಹ

By

Published : Apr 5, 2019, 10:51 AM IST

ಶಿವಮೊಗ್ಗ:ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿದ ಬಾಲಕಿಯ‌ ಪೋಷಕರು, ಮದುವೆಯಾದ ಯುವಕ ಮತ್ತು ಆತನ ಪೋಷಕರನ್ನು ಬಂಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಾರೊಬೆನವಳ್ಳಿ ತಾಂಡಾದಲ್ಲಿ ಮಾರ್ಚ್ 31 ರಂದು ಮಂಡೇನಕೊಪ್ಪದ ಪವನ್ ನಾಯ್ಕ ಎಂಬ ಯುವಕನೊಂದಿಗೆ ಬಾಲಕಿಯ ಮದುವೆಯಾಗಿತ್ತು. ಆದರೆ ಬಾಲಕಿಗೆ 17 ವರ್ಷ ವಯಸ್ಸು. ಈ ಕುರಿತು ಸಾರ್ವಜನಿಕರೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಮಕ್ಕಳ ರಕ್ಷಣಾ ಸಮಿತಿಯವರು ತಾಂಡಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಬಾಲಕಿ ಅಪ್ರಾಪ್ತೆಯಾಗಿದ್ದು, ಬಾಲ್ಯ ವಿವಾಹ ಮಾಡಿರುವುದಾಗಿ ತಿಳಿದುಬಂದಿದೆ.

ಸದ್ಯ ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಬಾಲ ಮಂದಿರದಲ್ಲಿಇರಿಸಲಾಗಿದೆ. ಬಾಲ್ಯ ವಿವಾಹ ಮಾಡಿದ ಬಾಲಕಿಯ ತಂದೆ, ತಾಯಿ ಹಾಗೂ ಬಾಲಕಿಯನ್ನು ಮದುವೆಯಾದ ಪವನ್ ನಾಯ್ಕ, ಆತನ ಪೋಷಕರಾದ ಸ್ವಾಮಿ ನಾಯ್ಕ, ತುಳಸಿ ಬಾಯಿ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

For All Latest Updates

TAGGED:

ABOUT THE AUTHOR

...view details