ಶಿವಮೊಗ್ಗ: ಪುಲ್ವಾಮಾ ಘಟನೆಗೆ ಭಾರತ ಪ್ರತೀಕಾರ ತೀರಿಸುತ್ತದೆ ಎಂದು ವಿಶ್ವಾಸ ಇಟ್ಟಿದ್ದ ದೇಶದ ಜನತೆಯ ಕನಸು ನನಸಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಉಗ್ರರ ವಿರುದ್ಧದ ಪ್ರತೀಕಾರ... ಸೇನೆ ಸೆಲ್ಯೂಟ್ ಹೇಳಿದ್ರು ಚಕ್ರವರ್ತಿ ಸೂಲಿಬೆಲೆ - chakravarthy sulibele
ಭಾರತೀಯ ವಾಯುಸೇನೆ ಪಾಖಿಸ್ತಾನಿ ಉಗ್ರರ ಬೇಸ್ ಕ್ಯಾಂಪ್ ಮೇಲೆ ನಿನ್ನೆ ನಡೆಸಿದ ದಾಳಿ ಕುರಿತಾಗಿ ಪ್ರಖರ ವಾಙ್ಮಿ ಚಕ್ರವರ್ತಿ ಸೂಲಿಬೆಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಉಗ್ರರ ನೆಲೆ ಮೇಲೆ ವಾಯುಪಡೆ ದಾಳಿ ಮಾಡಿರುವುದು ಹೆಮ್ಮೆ ಸಂಗತಿ. ಪಾಕಿಸ್ತಾನದ ಒಳಗೆ ನುಗ್ಗಿ ಪಾಕಿಸ್ತಾನದ 3 ಜಾಗಗಳಲ್ಲಿ ದಾಳಿ ಮಾಡಿರುವುದು ವಿಶೇಷ ಎಂದರು.ನಮಗೆ ಈ ದೇಶದ ಪ್ರಧಾನಿ ಬಗ್ಗೆ, ನಮ್ಮ ಸೇನೆಯ ಮೇಲೆ, ಜೊತೆಗೆ ಇಷ್ಟು ದಿನ ಸಂಯಮದಿಂದ ಕಾದ ದೇಶ ಭಕ್ತ ಜನರ ಮೇಲೆಯೂ ಸಹ ಹೆಮ್ಮೆ ಮತ್ತು ವಿಶ್ವಾಸ ಇದೆ ಎಂದರು.
ನಾನು ಈ ದಾಳಿಯನ್ನು ರಾಜಕೀಯವಾಗಿ ಚಿತ್ರೀಸಲು ಇಷ್ಟಪಡುವುದಿಲ್ಲ. ಈ ಹೋರಾಟ ಪಾಕಿಸ್ತಾನದ ವಿರುದ್ಧ ಅಲ್ಲ, ಇದು ಭಯೋತ್ಪಾದನೆಯ ವಿರುದ್ಧದ ಹೋರಾಟ ಎಂದು ಸೂಲಿಬೆಲೆ ಇದೇ ಸಂದರ್ಭದಲ್ಲಿ ಹೇಳಿದರು.
TAGGED:
chakravarthy sulibele