ಶಿವಮೊಗ್ಗ:ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ಶಿವಮೊಗ್ಗ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರೊಬ್ಬರು ತಮ್ಮೂರಿನ ಸಾರ್ವಜನಿಕರಿಗೆ ಬಾಡೂಟ ಹಾಕಿಸಿದ್ದಾರೆ.
ಶಿವಮೊಗ್ಗ: ಗ್ರಾಮದ ಜನರಿಗೆ ಬಾಡೂಟ ಹಾಕಿಸಿದ ಡಿಕೆಶಿ ಅಭಿಮಾನಿ - ಶಿವಮೊಗ್ಗದಲ್ಲಿ ಬಾಡೂಟ ಹಾಕಿಸಿದ ಡಿಕೆಶಿ ಅಭಿಮಾನಿ
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿಕೆಶಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ್ ತಮ್ಮೂರಿನ ಜನರಿಗೆ ಬಾಡೂಟ ಹಾಕಿಸಿದ್ದಾರೆ.
celebration for dk shivkumar appointed as President of kpcc
ಪಿಳ್ಳಂಗೇರಿ ಗ್ರಾಮದ ನಿವಾಸಿಯಾದ ನಾಗರಾಜ್, ಶಿವಮೊಗ್ಗ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು. ಇವರು ತಮ್ಮ ನೆಚ್ಚಿನ ನಾಯಕ ಕೆಪಿಸಿಸಿಯ ಸಾರಥಿಯಾಗಿರುವುದಕ್ಕೆ ಸಂತೋಷಗೊಂಡು ಬಾಡೂಟ ಹಾಕಿಸಿದ್ದಾರೆ. ಬಾಡೂಟದಲ್ಲಿ ಚಿಕನ್ ಕಬಾಬ್, ಘೀ ರೈಸ್ ಹಾಗೂ ಮಟನ್ ಚಾಪ್ಸ್ ಮಾಡಿಸಿದ್ದರು ಎನ್ನಲಾಗಿದೆ.
ಗ್ರಾಮದ ಕಾಳಿಕಾಂಬ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನ ಬಾಡೂಟ ಸೇವಿಸಿದ್ದಾರೆ. ಇದಕ್ಕೂ ಮುನ್ನ ಪದಗ್ರಹಣ ಕಾರ್ಯಕ್ರಮ ವೀಕ್ಷಿಸಿದ್ದಾರೆ.