ಕರ್ನಾಟಕ

karnataka

ETV Bharat / state

ದೇವರು ದೊಡ್ಡವನು... ಅಪಘಾತದಲ್ಲಿ ಯಾರಿಗೂ ಪೆಟ್ಟಾಗಿಲ್ಲ: ಹರತಾಳು ಹಾಲಪ್ಪ - ಅಪಘಾತ

ನಿನ್ನೆ ಮಾಜಿ ಶಾಸಕ ಹರತಾಳು ಹಾಲಪ್ಪ ಅವರ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು ಘಟನೆ ಬಗ್ಗೆ ಮಾಹಿತಿ ನೀಡಿದರು.

ಹರತಾಳು ಹಾಲಪ್ಪ

By

Published : Mar 17, 2019, 11:52 AM IST

ಶಿವಮೊಗ್ಗ:ಕಾರು ಅಪಘಾತದಲ್ಲಿ ನನ್ನ ಬಲಗಾಲಿಗೆ ಸ್ವಲ್ಪ ಪೆಟ್ಟಾಗಿದ್ದು ಬಿಟ್ಟರೆ, ನಾನು ಸೇಫಾಗಿದ್ದೇನೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ.

ಅಪಘಾತದ ನಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಸಾಗರದಿಂದ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯುವ ಕಾರ್ಯಕಾರಿಣಿ ಸಭೆಗೆ ಆಗಮಿಸುವ ವೇಳೆ ಕಾಸ್ಪಡಿ ಗ್ರಾಮದ ರಸ್ತೆಯಲ್ಲಿ ರೈತನೂರ್ವ ಟಿಲ್ಲರ್​ನಲ್ಲಿ ದರಗು ತುಂಬಿಕೊಂಡು ಏಕಾಏಕಿ ಮುಖ್ಯ ರಸ್ತೆಗೆ ಬಂದ, ಪರಿಣಾಮ ಕಾರು ಟಿಲ್ಲರ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಗುಂಡಿಗೆ ಡಿಕ್ಕಿ ಹೊಡೆಯಿತು ಎಂದು ವಿವರಿಸಿದರು.

ಹರತಾಳು ಹಾಲಪ್ಪ

ದೇವರು ದೊಡ್ಡವನು, ಕಾರಿನಲ್ಲಿದ್ದ ನನಗೆ ಸೇರಿದಂತೆ ಯಾರಿಗೂ ಸಹ ಪೆಟ್ಟಾಗಲಿಲ್ಲ. ಕಾರು ಚಾಲಕ ಜಯಂತ್, ಗನ್ ಮ್ಯಾನ್ ಹೇಮಕೃಷ್ಣ ನಾಯ್ಕ್, ಬಿಜೆಪಿ ಮುಖಂಡ ಚೇತನ್ ರಾಜ್, ಕಾಳನಾಯ್ಕ್, ಪ್ರವೀಣ್ ಜೊತೆ ಶಿವಮೊಗ್ಗಕ್ಕೆ ಆಗಮಿಸುವಾಗ ಈ ಘಟನೆ ನಡೆಯಿತು ಎಂದು ತಿಳಿಸಿದರು.

ನಂತರ ಬಿಜೆಪಿ ಮುಖಂಡ ಶ್ರೀಪಾದ್ ಅವರ ಕಾರಿನಲ್ಲಿ ಶಿವಮೊಗ್ಗಕ್ಕೆ ಬಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಬಲಗಾಲಿನ ಗಾಯಕ್ಕೆ ಚಿಕಿತ್ಸೆ ಪಡೆದು ಬ್ಯಾಡೆಂಜ್ ಕಟ್ಟಿಸಿಕೊಂಡು ಬಿಜೆಪಿ ಕಚೇರಿಗೆ ಬಂದು ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯ ಶಾಸಕರು ಸೇಫ್ ಆಗಿ, ಆರೋಗ್ಯದಿಂದ ಇದ್ದಾರೆ.

ABOUT THE AUTHOR

...view details