ಕರ್ನಾಟಕ

karnataka

ETV Bharat / state

ಓವರ್​ ಟೇಕ್​ ಮಾಡಲು ಹೋಗಿ ಅಪಘಾತ: ಓರ್ವ ಸಾವು - kannada news

ಶಿವಮೊಗ್ಗದಿಂದ ಸಾಗರ ಕಡೆ ಹೊರಟಿದ್ದ ಖಾಸಗಿ ಬಸ್​ಗೆ ಸಾಗರದಿಂದ ಶಿವಮೊಗ್ಗ ಕಡೆ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ. ಕಾರು ತನ್ನ ಮುಂದಿನ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಈ ಅನಾಹುತ ಸಂಭವಿಸಿದೆ.

ಬಸ್ ಗೆ ಕಾರು ಡಿಕ್ಕಿ

By

Published : Jun 9, 2019, 11:03 PM IST

ಶಿವಮೊಗ್ಗ:ಸಾಗರ ತಾಲೂಕಿನ‌ ಉಳ್ಳೂರು ಕ್ರಾಸ್ ಬಳಿ ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಕಾರು ಚಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ಘಟನೆಯಲ್ಲಿ ಕಾರಿನಲ್ಲಿದ್ದ ಮೂವರಿಗೆ ತೀವ್ರ ಗಾಯಗಳಾಗಿವೆ. ಶಿವಮೊಗ್ಗದಿಂದ ಸಾಗರ ಕಡೆ ಹೊರಟಿದ್ದ ಖಾಸಗಿ ಬಸ್​ಗೆ ಸಾಗರದಿಂದ ಶಿವಮೊಗ್ಗ ಕಡೆ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ. ಕಾರು ತನ್ನ ಮುಂದಿನ ವಾಹನವನ್ನು ಓವರ್ ಟೇಕ್ ಮಾಡಲು ಹೋಗುವಾಗ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿಗೆ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಬಸ್ ಡ್ರೈವರ್ ಬಸ್ ನ್ನು ಸಂಪೂರ್ಣ ತಿರುಗಿಸಿದ್ದಾನೆ.

ಪರಿಣಾಮ ಬಸ್ ರಸ್ತೆ ಪಕ್ಕದ ಅಂಗನವಾಡಿ ಹಾಗೂ‌ ಪಕ್ಕದ ಶೆಡ್​ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್​ನಲ್ಲಿದ್ದ 10 ಕ್ಕೂ‌ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸಾಗರ ಉಪ ವಿಭಾಗೀಯ‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details