ಕರ್ನಾಟಕ

karnataka

ETV Bharat / state

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್​ಗೆ ಕೊರೊನಾ ದೃಢ - ಶಿವಮೊಗ್ಗ ಕೊರೊನಾ ಪ್ರಕರಣ

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಬೆಂಗಳೂರಿನ ಮಣಿಪಾಲ‌ ಆಸ್ಪತ್ರೆಗೆ‌ ಶಿಫ್ಟ್ ಆಗಿದ್ದಾರೆ.

bhadravati-mla-b-k-sangamesh-tested-corona-positive
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್​ಗೆ ಕೊರೊನಾ ದೃಢ

By

Published : Sep 21, 2020, 6:36 AM IST

ಶಿವಮೊಗ್ಗ : ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಕಳೆದ ಮೂರು ದಿನಗಳ ಹಿಂದೆ ಶಾಸಕರ ಮನೆಯ ಕೆಲಸದವರಲ್ಲಿ ಕೊರೊನಾ ಕಂಡು ಬಂದ ಕಾರಣ, ಮನೆಯನ್ನು‌ ಸೀಲ್​ಡೌನ್ ಮಾಡಲಾಗಿತ್ತು. ಇದರಿಂದ ಶಾಸಕರಿಗೂ ಸಹ ಪರೀಕ್ಷೆ ನಡೆಸಲಾಗಿತ್ತು. ಭಾನುವಾರ ಶಾಸಕ ಸಂಗಮೇಶ್ ಅವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ.

ಶಾಸಕರು ಬೆಂಗಳೂರಿನ ಮಣಿಪಾಲ‌ ಆಸ್ಪತ್ರೆಗೆ‌ ಶಿಫ್ಟ್ ಆಗಿದ್ದಾರೆ. ಇದರಿಂದ ಜಿಲ್ಲೆಯ ಐವರು ಶಾಸಕರಿಗೆ ಕೊರೊನಾ ಸೊಂಕು ತಗುಲಿದಂತಾಗಿದೆ.

ABOUT THE AUTHOR

...view details