ಶಿವಮೊಗ್ಗ:ತಾವು ಕೆಲಸ ಮಾಡುತ್ತಿದ್ದ ಬಾರ್ನಲ್ಲಿ ಕಳ್ಳತನ ಮಾಡಿ ಇಬ್ಬರು ಪೊಲೀಸರ ಅತಿಥಿಯಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.
ತಾವು ಕೆಲಸ ಮಾಡುತ್ತಿದ್ದ ಬಾರ್ನಲ್ಲೇ ಕಳ್ಳತನ: ಇಬ್ಬರ ಬಂಧನ - latestr shivamogga thieves news
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ತಾವು ಕೆಲಸ ಮಾಡುತ್ತಿದ್ದ ಬಾರ್ನಲ್ಲೇ ಕಳ್ಳತನ ಮಾಡಿದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಬೆಜ್ಜುವಳ್ಳಿಯ ಸಪ್ತಗಿರಿ ಬಾರ್ನಲ್ಲಿ ಕಳ್ಳತನವಾಗಿದೆ ಎಂದು ಮಾಲೀಕರು ದೂರು ನೀಡಿದ್ದರು. ಈ ಕುರಿತು ತನಿಖೆ ಪ್ರಾರಂಭಿಸಿದ ಮಾಳೂರು ಪೊಲೀಸರಿಗೆ ಬಾರ್ನಲ್ಲಿ ಕೆಲಸ ಮಾಡುವ ಈಶ್ವರ ಹಾಗೂ ರಾಘವೇಂದ್ರ ಎಂಬುವರ ಮೇಲೆ ಅನುಮಾನ ಬಂದು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ಧಾರೆ. ಆಗ ಮದ್ಯಕ್ಕೆ ಸಖತ್ ಡಿಮ್ಯಾಂಡ್ ಇರುವುದರಿಂದ ಬಾರ್ಗೆ ಕನ್ನ ಹಾಕಿ ಸುಮಾರು 4 ಲಕ್ಷದಷ್ಟು ಮದ್ಯವನ್ನು ಕದೀಮರು ಕದ್ದಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ತನಿಖೆಯಲ್ಲಿ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ಮಾಳೂರು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗೆ ಕಳುಹಿಸಿದ್ದಾರೆ.