ಕರ್ನಾಟಕ

karnataka

ETV Bharat / state

ಕೊರೊನಾ ಸಂದರ್ಭದಲ್ಲಿ ಆಯುರ್ವೇದದ ಮಹತ್ವ ಅರಿವಿಗೆ ಬಂದಿದೆ: ಸಚಿವ ಈಶ್ವರಪ್ಪ - shimogga leatest news

ಕೊರೊನಾ ಸಂದರ್ಭದಲ್ಲಿ ದೇಶದ ಕೋಟ್ಯಂತರ ಜನರು ಆಯುರ್ವೇದ ಪದ್ಧತಿ ಅನುಸರಿಸಿದ ಪರಿಣಾಮ ಕೊರೊನಾದಿಂದ ದೂರ ಉಳಿದರು ಎನ್ನಲಾಗಿದೆ. ಆಯುರ್ವೇದಿಕ್ ಪದ್ಧತಿಯು ಅತ್ಯಂತ ಸುರಕ್ಷಿತ ಕ್ರಮವಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ayurvedic-health-camp-inaugurate-ks-eswarappa-shimogga-news
ಭಾರತೀಯ ಆಯುರ್ವೇದಕ್ಕೆ ವಿಶ್ವದಲ್ಲಿ ವಿಶೇಷ ಸ್ಥಾನ

By

Published : Nov 7, 2020, 9:09 PM IST

ಶಿವಮೊಗ್ಗ:ಭಾರತೀಯ ಆಯುರ್ವೇದ ಪದ್ಧತಿಗೆ ವಿಶ್ವದಲ್ಲಿ ವಿಶೇಷ ಸ್ಥಾನವಿದ್ದು, ಕೊರೊನಾ ಸಂದರ್ಭದಲ್ಲಿ ಆಯುರ್ವೇದದ ಮಹತ್ವ ಪ್ರತಿಯೊಬ್ಬರ ಅರಿವಿಗೂ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಚಿವ ಕೆ.ಎಸ್.ಈಶ್ವರಪ್ಪ

ವಿನಾಯಕ ನಗರ ನಿವಾಸಿಗಳ ಸಂಘ ಹಾಗೂ ನಿಸರ್ಗ ಸಂಜೀವಿನಿ ಸೋಷಿಯಲ್ ಆಂಡ್ ವೆಲ್‌ಫೇರ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಆಯುರ್ವೇದ ಪದ್ಧತಿ ಬಗ್ಗೆ ಮತ್ತೆ ದೇಶದಲ್ಲಿ ಕಾಳಜಿ ಉಂಟಾಗುತ್ತಿದ್ದು, ಎಲ್ಲರೂ ಆಯುರ್ವೇದಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ದೇಶದ ಕೋಟ್ಯಂತರ ಜನರು ಆಯುರ್ವೇದ ಪದ್ಧತಿ ಅನುಸರಿಸಿದ ಪರಿಣಾಮ ಕೊರೊನಾದಿಂದ ದೂರ ಉಳಿದರು ಎನ್ನಲಾಗಿದೆ. ಆಯುರ್ವೇದಿಕ್ ಪದ್ಧತಿಯು ಅತ್ಯಂತ ಸುರಕ್ಷಿತ ಕ್ರಮವಾಗಿದೆ ಎಂದರು.

ಪ್ರಸ್ತುತ ಕಾಲಘಟ್ಟದಲ್ಲಿ ಆಯುರ್ವೇದ ಮತ್ತು ಯೋಗ ಪ್ರತಿಯೊಬ್ಬ ಮನುಷ್ಯನಿಗೆ ಅತ್ಯಂತ ಅವಶ್ಯಕವಾಗಿರುವ ಮಹತ್ವದ ಅಂಶಗಳು. ಎಲ್ಲರೂ ದಿನನಿತ್ಯ ಯೋಗಾಭ್ಯಾಸ ಮಾಡಬೇಕು. ಆರೋಗ್ಯಯುತ ಮತ್ತು ಮಾನಸಿಕ ಸದೃಢ ಚಿಂತನೆಯ ಜೀವನಕ್ಕೆ ಯೋಗ ಮತ್ತು ಆಯುರ್ವೇದ ಸಹಕಾರಿ. ಜನರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಮಾಡುವ ಪ್ರತಿಯೊಂದು ಕಾರ್ಯವು ಶ್ರೇಷ್ಠ ಕೆಲಸ ಎಂದರು.

ವಿನಾಯಕ ನಗರ ನಿವಾಸಿಗಳ ಸಂಘವು ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಎಲ್ಲಾ ಸಂಘ ಸಂಸ್ಥೆಗಳಿಗೂ ಮಾದರಿ ಎನಿಸುವ ಕೆಲಸ ಮಾಡಿದೆ. ನಗರದ ಎಲ್ಲಾ ಸಂಘ ಸಂಸ್ಥೆಗಳು ಸಮಾಜಮುಖಿ ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.

ABOUT THE AUTHOR

...view details