ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಅವರದ್ದು ಮಂಗನ ಸ್ವಭಾವ : ಆಯನೂರು ವ್ಯಂಗ್ಯ - kannadanews

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಮಂಕಿ ಸ್ವಭಾವ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗವಾಡಿದ್ದಾರೆ.

ಆಯನೂರು ಮಂಜುನಾಥ್

By

Published : May 6, 2019, 11:41 PM IST

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಮಂಗನ ಸ್ವಭಾವ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗವಾಡಿದ್ದಾರೆ.


ಶಿವಮೊಗ್ಗದಲ್ಲಿ ಮಾತನಾಡಿದ ಮಂಜುನಾಥ್, ಮಾಜಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಚೇಷ್ಟೆ ಮಾಡುತ್ತಾರೆ ಎಂದು ವ್ಯಂಗವಾಡಿದರು.
ನೆಟ್ಟಗೆ ನಿಂತು ಮಾತನಾಡದೆ ಅಂಗಾಂಗ ಕುಣಿಸುವ ಮೂಲಕ ಚೇಷ್ಟೆ ಮಾಡುತ್ತಾರೆ.

ಆಯನೂರು ಮಂಜುನಾಥ್ ವ್ಯಂಗ್ಯ

ಸಿದ್ದರಾಮಯ್ಯನವರ ಮೇಲೆ ಎಷ್ಟು ಲೋಕಾಯುಕ್ತ ಕೇಸ್ ಗಳಿವೆ ಎಂದು ನಮಗೆ ಆರ್ ಟಿ ಐ ದಾಖಲೆಯಲ್ಲಿ ಗೊತ್ತಾಗಿದೆ. ಅದರಲ್ಲಿ ಎಷ್ಟು ತನಿಖೆ ಆಗಿವೆ ಎಂದು ಪ್ರಶ್ನಿಸಿದರು. ಲೋಕಾಯುಕ್ತ ಮತ್ತು ಎಸಿಬಿ ಯಾರ ಗುಲಾಮರಾಗಿದ್ದಾರೆ ಎಂದು ಅವರು ಗುಡುಗಿದ್ರು.


ತಾವು ಪ್ರಾಮಾಣಿಕ ನಿಷ್ಠಾವಂತ ಮಂತ್ರಿ ಆಗಿದ್ದರೆ ಸಿದ್ದರಾಮಯ್ಯ ನವರ ಮೇಲೆ ತನಿಖೆಗೆ ಆದೇಶ ನೀಡಿ ಎಂದು ಗೃಹ ಸಚಿವರಿಗೆ ಟಾಂಗ್ ನೀಡಿದರು.
ಈ ಹಿಂದೆ ಹೇಗೆ ತರಾತುರಿಯಲ್ಲಿ ಲೋಕಾಯುಕ್ತದ ಮೂಲಕ ಯಡಿಯೂರಪ್ಪನವರನ್ನ ಬಂಧಿಸುವ ಕೆಲಸ ಮಾಡಿದರೋ ಹಾಗೇ ಸಿದ್ದರಾಮಯ್ಯ ನವರನ್ನ ಸಹ ಬಂಧಿಸಿ ಎಂದು ಗೃಹ ಸಚಿವ ಎಂ .ಬಿ ಪಾಟೀಲ್ ಅವರಿಗೆ ಒತ್ತಾಯಿಸಿದರು.

ABOUT THE AUTHOR

...view details