ಶಿವಮೊಗ್ಗ :ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನ ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಅಣ್ಣಾ ನಗರದ ನಿವಾಸಿ ತಬ್ರೇಜ್ ಅಲಿಯಾಸ್ ಬಚ್ಚೆ (30) ಎಂಬಾತ ಬಂಧಿತ ಆರೋಪಿ. ಈತನಿಂದ 1 ಲಕ್ಷದ 80 ಸಾವಿರ ರೂ. ಮೌಲ್ಯದ 45 ಗ್ರಾಂ ಚಿನ್ನಾಭರಣ ಮತ್ತು 96 ಸಾವಿರ ರೂ. ಮೌಲ್ಯದ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈತ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಭಾಗದಲ್ಲಿ ಎರಡು ಹಾಗೂ ಹೊಳೆಹೂನ್ನೂರು ಪೊಲೀಸ್ ಠಾಣಾ ಭಾಗದಲ್ಲಿ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದ.
ಸಾಗರ ಗ್ರಾಮಾಂತರ ಠಾಣೆಯ ಸಿಪಿಐ ಕುಮಾರಸ್ವಾಮಿ ನೇತೃತ್ವದಲ್ಲಿ ಪಿಎಸ್ಐ ಭರತ್ ಹಾಗೂ ಶ್ರೀಮತಿ ಸುಜಾತ ಮತ್ತು ಸಿಬ್ಬಂದಿ ಫೈರೋಜ್ ಅಹ್ಮದ್, ಅಶೋಕ್, ರವಿಕುಮಾರ್ ಮತ್ತು ಸಾಗರ ಟೌನ್ ಪೊಲೀಸ್ ಠಾಣೆಯ ಹಜರತ್ ಅಲಿ, ಸಂತೋಷ್ ನಾಯ್ಕ್ ಕಾರ್ಯಾಚರಣೆಯಲ್ಲಿದ್ದರು.
ಓದಿ : ಕೆಲಸ ನೀಡುವುದಾಗಿ ಕರೆಸಿಕೊಂಡು ಯುವತಿಯರ ಬಂಧಿಸಿಟ್ಟ ಆರೋಪಿ ಅಂದರ್