ಕರ್ನಾಟಕ

karnataka

ETV Bharat / state

ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರವೇಶಾತಿ ಆರಂಭ - kannadanews

ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ2019 -20 ನೇ ಸಾಲಿನ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಪ್ರವೇಶಾತಿ ಆರಂಭ

By

Published : Jul 2, 2019, 7:56 AM IST

ಶಿವಮೊಗ್ಗ:ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ2019 -20 ನೇ ಸಾಲಿನ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಮುಕ್ತ ವಿವಿ ಉನ್ನತ ಶಿಕ್ಷಣಕ್ಕಾಗಿ ಹಲವು ವರ್ಷಗಳಿಂದ ನಿರಂತರವಾಗಿ ಶೈಕ್ಷಣಿಕ ಚಟುವಟಿಕೆ ನಡೆಸಿಕೊಂಡು ಬಂದಿದೆ. ರಾಜ್ಯದ ಉಳಿದ ದೂರ ಶಿಕ್ಷಣ ಸಂಸ್ಥೆಗಳಿಗಿಂತ ಭಿನ್ನವಾಗಿ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ ಎಂದರು. ಈ ಹಿಂದೆ ವಿವಿಯ ಮೇಲೆ ಕೆಲ ಆರೋಪಗಳಿದ್ದವು, ಆ ಎಲ್ಲಾ ಆರೋಪಗಳಿಂದ ನಾವು ಮುಕ್ತವಾಗಿದ್ದೇವೆ ಫಲಿತಾಂಶ ವಿಳಂಬವಾಗುತ್ತಿಲ್ಲ,ಕೆಲವು ಗೊಂದಲಗಳು ಈಗಾಗಲೇ ನಿವಾರಣೆಯಾಗಿವೆ. ಹೊಸ ಯೋಜನೆಗಳ ಮೂಲಕ ಮತ್ತು ಹೊಸ ಕೋರ್ಸ್ ಗಳ ಮೂಲಕ ತನ್ನದೇ ಆದ ಗುಣಮಟ್ಟವನ್ನು ಕಾಯ್ದುಕೊಂಡು ಬರಲಾಗಿದೆ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಪ್ರವೇಶಾತಿ ಆರಂಭ

ಪ್ರಸಕ್ತ ವರ್ಷದಲ್ಲಿ ಪ್ರವೇಶಾತಿಗೆ ಈಗಾಗಲೇ ಅರ್ಜಿ ಕರೆಯಲಾಗಿದ್ದು, ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 25 ಆಗಿದೆ, ಹಾಗೆ ರೂ 200 ದಂಡದೊಂದಿಗೆ. ಆಗಸ್ಟ್ 20ರ ಒಳಗೆ ಅರ್ಜಿಸಲ್ಲಿಸಬಹುದು, ಮತ್ತು 400 ರೂ. ದಂಡದೊಂದಿಗೆ ಆಗಸ್ಟ್ 31ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು. ಬಿಎ, ಬಿಕಾಂ ಪದವಿ ಮತ್ತು ಉನ್ನತ ಶಿಕ್ಷಣ ವಿವಿಧ ಡಿಪ್ಲೋಮಾ ಕೋರ್ಸ್ ಗಳಿಗೆ ಅವಕಾಶ ನೀಡಲಾಗಿದೆ. ಆನ್ಲೈನ್, ಯೂಟ್ಯೂಬ್ನಲ್ಲಿ ತರಗತಿಗಳು ಆರಂಭವಾಗಿದೆ ಎಂದರು. ಕರ್ನಾಟಕ ರಾಜ್ಯ ಮುಕ್ತ ವಿವಿ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದ್ದು ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ ಎಂದು ಡಾ. ವಿದ್ಯಾಶಂಕರ ತಿಳಿಸಿದ್ರು.

ABOUT THE AUTHOR

...view details