ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಎಬಿವಿಪಿ ಕಾರ್ಯಕಾರಿಣಿ ಸಭೆ; ಸಂಘಟನೆ ಮಹತ್ವ, ಹೋರಾಟದ ಚರ್ಚೆ - ಶಿವಮೊಗ್ಗ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿರುವ​ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಸಭೆ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ನಡೆಯುತ್ತಿದೆ.

ಎಬಿವಿಪಿ ಕಾರ್ಯಕಾರಿಣಿ ಸಭೆ

By

Published : Sep 22, 2019, 12:10 PM IST

ಶಿವಮೊಗ್ಗ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಸಭೆ ಇಲ್ಲಿನ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ನಡೆಯುತ್ತಿದೆ.

ಎಬಿವಿಪಿ ರಾಜ್ಯಾಧ್ಯಕ್ಷ ಡಾ.‌ಅಲ್ಲಮಪ್ರಭು ಗುಡ್ಡ ದೀಪ ಬೆಳಗಿಸಿ, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಎಬಿವಿಪಿ ಕಾರ್ಯಕಾರಿಣಿ ಸಭೆಯ ಉದ್ಘಾಟನೆ

ಎಬಿಪಿಬಿ ರಾಜ್ಯದಲ್ಲಿ ನಡೆಸಬಹುದಾದ ಕಾರ್ಯಚಟುವಟಿಕೆಗಳು ಹಾಗು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಡೆಸಬೇಕಾದ ಹೋರಾಟಗಳೂ ಸೇರಿದಂತೆ ಹಲವು ವಿಚಾರಗಳು ಈ ವೇಳೆ ಚರ್ಚೆಯಾಗಲಿದೆ.

ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯಿಂದ ಸುಮಾರು 200ಕ್ಕೂ ಹೆಚ್ಚು ಯುವಕ ಹಾಗೂ ಯುವತಿಯರು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದಾರೆ. ಸಂಘಟನೆಯ ಮಹತ್ವ, ಹೋರಾಟ ಸೇರಿದಂತೆ ಶಾಖೆಗಳನ್ನು ನಡೆಸಿಕೊಂಡು ಹೋಗುವ, ಹೋರಾಟದ ವೇಳೆಯಲ್ಲಿ ವೇದಿಕೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬೆಲ್ಲಾ ವಿಚಾರಗಳನ್ನು ತಿಳಿಸಿಕೊಡುವ ಉದ್ದೇಶ ಕಾರ್ಯಕಾರಣಿ ಹೊಂದಿದೆ.

ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ, ಪ್ರಾಂತ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರುಳಪುರ್ ಹಾಗೂ ಪ್ರಾಂತ ಪ್ರಮುಖರಾದ ಡಾ.ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details