ಶಿವಮೊಗ್ಗ: ಮಲೆನಾಡಿನ ಪೋರನೊಬ್ಬ 16 ವರ್ಷದ ವಯೋಮಿತಿ ಒಳಗಿನ 50 ಓವರ್ ಕ್ರಿಕೆಟ್ನಲ್ಲಿ 407 ರನ್ ಬಾರಿಸುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಶಿವಮೊಗ್ಗ ಹೊರ ವಲಯದ ಪೆಸೆಟ್ ಕಾಲೇಜು ಮೈದಾನದಲ್ಲಿ ಕೆಎಸ್ಸಿಎ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಲಕ ಈ ಸಾಧನೆ ಮಾಡಿದ್ದಾರೆ.
16 ವರ್ಷದೊಳಗಿನ ಕ್ರಿಕೆಟ್ ಲೀಗ್ನಲ್ಲಿ ಎನ್.ಟಿ.ಪಿ.ಸಿ ಭದ್ರಾವತಿ ಹಾಗೂ ಸಾಗರ ಕ್ರಿಕೆಟ್ ಕ್ಲಬ್ ಮಧ್ಯೆ ಇಂದು ಪಂದ್ಯ ಆಯೋಜಿಸಲಾಗಿತ್ತು. ಮೊದಲು ಬ್ಯಾಟಿಂಗ್ ಆರಂಭಿಸಿದ ಸಾಗರ ತಂಡ 50 ಓವರ್ಗಳಲ್ಲಿ 583 ರನ್ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕ ಆಟಗಾರ ತನ್ಮಯ್ ಮಂಜುನಾಥ್ ಎಂಬ ಕೇವಲ 165 ಬಾಲ್ನಲ್ಲಿ 407 ರನ್ ಬಾರಿಸಿದ್ದಾರೆ. ಇದರಲ್ಲಿ 48 ಫೋರ್, 24 ಸಿಕ್ಸರ್ಗಳಿವೆ. ತನ್ಮಯ್ ಜೊತೆ ಆಟವಾಡಿದ ಅಂಶು ಅವರು 120 ರನ್ ಬಾರಿಸಿದ್ದರು. ಈ ಮೂಲಕ 350 ರನ್ಗಳ ಜೊತೆಯಾಟವಾಡಿದರು.
ಇದನ್ನೂ ಓದಿ:ವೈಟ್ ಬಾಲ್ ಇತಿಹಾಸದಲ್ಲಿ ಭಾರತ ಅತ್ಯಂತ ಕಳಪೆ ಆಟವಾಡಿದ ತಂಡ: ಮೈಕಲ್ ವಾನ್ ಟೀಕೆ