ಶಿವಮೊಗ್ಗ:ನಾಡಬಾಂಬ್ ಸ್ಫೋಟಗೊಂಡು ಓರ್ವ ಗಂಭೀರವಾಗಿ ಗಾಯಗೊಂಡಿದ್ದು, 8 ಮಂದಿಗೆ ಸಣ್ಣ-ಪುಟ್ಟ ಗಾಯವಾಗಿರುವ ಘಟನೆ ತಾಲೂಕಿನ ಕುಂಚೇನಹಳ್ಳಿ ತಾಂಡಾದಲ್ಲಿ ನಡೆದಿದೆ. ಕಾಡಂದಿ ಸೇರಿದಂತೆ ಇತರೆ ಪ್ರಾಣಿಗಳನ್ನು ಕೊಲ್ಲಲು ಕಚ್ಚ ಬಾಂಬ್ ಅಥವಾ ನಾಡಬಾಂಬ್ ಬಳಸುತ್ತಾರೆ. ನಾಡಬಾಂಬ್ ಅನ್ನು ಒಣಗಲು ಹಾಕುವಾಗ ಸ್ಟೋಟಗೊಂಡಿದೆ.
ನಾಡಬಾಂಬ್ ಸ್ಫೋಟಿಸಿ 8 ಮಂದಿಗೆ ಗಾಯ, ಓರ್ವ ಗಂಭೀರ - shivamogga hospital
ತಾಲೂಕಿನ ಕುಂಚೇನಹಳ್ಳಿ ತಾಂಡಾದಲ್ಲಿ ನಾಡಬಾಂಬ್ ಸ್ಫೋಟಗೊಂಡ ಪರಿಣಾಮ ಓರ್ವನಿಗೆ ಗಂಭೀರ ಗಾಯವಾಗಿದ್ದು, ಈತನ ಜೊತೆ 8 ಮಂದಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಕಾಡು ಪ್ರಾಣಿಗಳ ಬೇಟೆಗೆ ಬಳಸುವ ಬಾಂಬ್ ಇದಾಗಿದ್ದು, ಆಕಸ್ಮಿಕವಾಗಿ ಸ್ಫೋಟಗೊಂಡು ದುರ್ಘಟನೆ ನಡೆದಿದೆ.
ನಾಡಬಾಂಬ್ ಸ್ಫೋಟಿಸಿ 8 ಮಂದಿಗೆ ಗಾಯ, ಓರ್ವ ಗಂಭೀರ
ಘಟನೆಯಲ್ಲಿ ತಮಿಳು ಕುಮಾರ ಎಂಬಾತನಿಗೆ ಗಂಭೀರ ಗಾಯವಾಗಿದೆ. ಈತನ ಜೊತೆ ಇತರೆ 8 ಜನರಿಗೆ ಗಾಯವಾಗಿದೆ. ತಮಿಳು ಕುಮಾರನ ಮನೆಯಲ್ಲಿ ನಾಡಬಾಂಬ್ ಸಂಗ್ರಹಿಸಲಾಗಿತ್ತು. ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
kachhabomb_blast