ಕರ್ನಾಟಕ

karnataka

ETV Bharat / state

ಯು ಆರ್‌ ಅನಂತಮೂರ್ತಿ, ಪಿ. ಲಂಕೇಶ್‌ರನ್ನ ಸ್ಮರಿಸಿದ ಸಿಎಂ ಯಡಿಯೂರಪ್ಪ.. - 1 crores rs given by cm to Sahyadri College

ಕಾಲೇಜಿನವರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿದ ಸಿಎಂ, ತಕ್ಷಣಕ್ಕೆ 1 ಕೋಟಿ‌ ರೂ.‌ ನೀಡಲಾಗುವುದು, ಮುಂದಿನ ಬಜೆಟ್​ನಲ್ಲಿ ಉಳಿದ ಹಣ ನೀಡಲಾಗುವುದು..

ಪುರುಷ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಉದ್ಘಾಟಿಸಿದ ಸಿಎಂ
ಪುರುಷ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಉದ್ಘಾಟಿಸಿದ ಸಿಎಂ

By

Published : Nov 29, 2020, 6:37 PM IST

ಶಿವಮೊಗ್ಗ:ಜಿಲ್ಲೆಯ ಪ್ರಸಿದ್ಧ ಶಿಕ್ಷಣ ಕೇಂದ್ರವಾದ ಸಹ್ಯಾದ್ರಿ ಕಾಲೇಜಿನ ಸರ್ವಾಂಗೀಣ ಅಭಿವೃದ್ದಿಗೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರು 1 ಕೋಟಿ ರೂ. ಘೋಷಿಸಿದ್ದಾರೆ.

ಪುರುಷರ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಉದ್ಘಾಟಿಸಿದ ಸಿಎಂ

ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಸ್ತರಣಾ ಕಟ್ಟಡ, ಪ್ರವೇಶ ದ್ವಾರ ಹಾಗೂ ಪುರುಷರ ವಿದ್ಯಾರ್ಥಿ ವಸತಿ ನಿಲಯ ಕಟ್ಟಡಗಳ ಉದ್ಘಾಟನೆಯನ್ನು ಸಿಎಂ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸಹ್ಯಾದ್ರಿ ಕಾಲೇಜಿಗೆ ಒಂದು ಇತಿಹಾಸವಿದೆ. ಈ ಕಾಲೇಜಿನಲ್ಲಿ ಸಾಹಿತಿಗಳಾದ ಯು ಆರ್ ಅನಂತಮೂರ್ತಿ, ಪಿ. ಲಂಕೇಶ್‌ರಂತಹ ದಿಗ್ಗಜರು‌ ಓದಿದ್ದಾರೆ. ಇಂತಹ ಕಾಲೇಜಿನ ವಿಸ್ತರಣಾ ಕಟ್ಟಡ ಉದ್ಘಾಟನೆ ಮಾಡಿದ್ದೇನೆ ಎಂದರು.

ಕಾರವಾರ: ಮೀನಿಗೆ ಬೀಡಿ ಸೇದಿಸಿ ವಿಕೃತಿ ಮೆರೆದ ಬೋಟ್ ಕಾರ್ಮಿಕರು!

ನಂತರ ಕಾಲೇಜಿನವರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿದ ಸಿಎಂ, ತಕ್ಷಣಕ್ಕೆ 1 ಕೋಟಿ‌ ರೂ.‌ ನೀಡಲಾಗುವುದು, ಮುಂದಿನ ಬಜೆಟ್​ನಲ್ಲಿ ಉಳಿದ ಹಣ ನೀಡಲಾಗುವುದು ಎಂದರು.

ABOUT THE AUTHOR

...view details