ಕರ್ನಾಟಕ

karnataka

ETV Bharat / state

ಬಂಜೆತನ ನಿವಾರಣೆಗೆ ನಾಟಿತಜ್ಞೆಯ ಟ್ರೀಟ್​​​​​​ಮೆಂಟ್​.. ಮಕ್ಕಳಾಗದವರಿಗೆ ಮಕ್ಕಳ ಭಾಗ್ಯಕಲ್ಪಿಸುವ ಲಕ್ಷ್ಮಮ್ಮ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ತಮ್ಮನ್ನು ತಾವು ಹಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ, ಅಂತೆಯೇ ನಾಡು ,ನುಡಿ, ನೆಲ, ಜಲದ ವಿಚಾರವಾಗಿ ದಶಕಗಳಿಂದ ಹೋರಾಟದಲ್ಲಿ ತೊಡಗಿರುವ ಚೆನ್ನಪಟ್ಟಣ ತಾಲೂಕಿನ ಹಾರೋದೊಡ್ಡಿಯ ಕೆ.ಟಿ ಲಕ್ಷ್ಮಮ್ಮ ಗ್ರಾಮೀಣ ಮಹಿಳೆಯರಿಗೆ ಆದರ್ಶವಾಗಿದ್ದಾರೆ. ಇವರ ಕುರಿತಾದ ವಿಶೇಷ ಮಾಹಿತಿ ಇಲ್ಲಿದೆ..

womens-day-special-article-on-k-t-lakshmamma
ಅಂತರ ರಾಷ್ಟ್ರಿಯ ಮಹಿಳಾ ದಿನಾಚರಣೆ

By

Published : Mar 8, 2022, 1:47 PM IST

Updated : Mar 8, 2022, 3:49 PM IST

ರಾಮನಗರ : ಬಂಜೆತನ ನಿವಾರಣೆಯ ನಾಟಿವೈದ್ಯೆಯಾಗಿ, ಕನ್ನಡಪರ- ಮಹಿಳಾ ಪರ ಹೋರಾಟಗಾರ್ತಿ ಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ರಾಷ್ಟ್ರೀಯ ಪಕ್ಷವೊಂದರ ಪ್ರಮುಖ ಪದಾಧಿಕಾರಿಯಾಗಿ ಹೀಗೆ ಒಮ್ಮೆಲೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಿಸಿಕೊಂಡಿರುವ ಚನ್ನಪಟ್ಟಣ ತಾಲ್ಲೂಕಿನ ಹಾರೋಹಳ್ಳಿದೊಡ್ಡಿಯ ಕೆ.ಟಿ.ಲಕ್ಷ್ಮಮ್ಮ ಅವರು ಗ್ರಾಮೀಣ ಭಾಗದ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.

ಪ್ರವೃತ್ತಿ :ಸಂತಾನ ಫಲಕ್ಕಾಗಿ ನಾಟಿವೈದ್ಯೆಯಾಗಿ, ಸಮಾಜಸೇವೆ, ಮಹಿಳಾ ಪರ ಹೋರಾಟಗಳಲ್ಲಿ, ಪರಿಸರ, ಆರೋಗ್ಯ ಹಾಗೂ ಕನ್ನಡಪರ ಹೋರಾಟಗಳಲ್ಲಿ, ನಾಡು, ನುಡಿ, ಗಡಿ, ನೆಲ, ಜಲ ವಿಚಾರವಾಗಿ ಕಳೆದ ಎರಡು ದಶಕಗಳಿಂದ ನಿರಂತರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಈ ಲಕ್ಷ್ಮಮ್ಮ. ಹಾರೋಹಳ್ಳಿದೊಡ್ಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ, ಚನ್ನಪಟ್ಟಣ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷೆಯಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಹೋರಾಟದ ಮೂಲಕ ಸಾಮಾಜಿಕ ಜೀವನ ಆರಂಭ:2007 ರಿಂದ 2009 ರವರೆಗೆ ಜಯಕರ್ನಾಟಕ ಕನ್ನಡಪರ ಸಂಘಟನೆಯಲ್ಲಿ ರಾಮನಗರ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಘಟನೆಯಲ್ಲಿ 2010 ರಿಂದ 2018 ರವರೆಗೆ ರಾಜ್ಯ ಖಜಾಂಚಿಯಾಗಿ ಸೇವೆ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಕಾವೇರಿ ಹೋರಾಟ, ಪಾದಯಾತ್ರೆ, ಕೆಐಎಡಿಬಿ ಹಗರಣದ ವಿರುದ್ಧದ ಹೋರಾಟದಲ್ಲಿ ಕಾರಾಗೃಹ ವಾಸ, ಕನ್ನಡ ನಾಡು, ನುಡಿ, ಗಡಿ, ನೆಲ-ಜಲದ ವಿಚಾರವಾಗಿ ರಸ್ತೆ ತಡೆ, ರೈಲು ತಡೆ ಹಾಗೂ ನೂರಾರು ಪ್ರತಿಭಟನೆಗಳು, ಮುಷ್ಕರಗಳಲ್ಲಿ ಸಕ್ರಿಯ ಭಾಗವಹಿಸಿದ್ದಾರೆ.

ಬಂಜೆತನ ನಿವಾರಣೆಗೆ ನಾಟಿತಜ್ಞೆಯ ಟ್ರೀಟ್​​​​​​ಮೆಂಟ್​.. ಮಕ್ಕಳಾಗದವರಿಗೆ ಮಕ್ಕಳ ಭಾಗ್ಯಕಲ್ಪಿಸುವ ಲಕ್ಷ್ಮಮ್ಮ

ವಿಶೇಷ ಸೇವೆ :ಹಾರೋಹಳ್ಳಿಯ ಶ್ರೀ ಸಿದ್ದೇಶ್ವರ ಜನಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ಟ್ರಸ್ಟ್ ಮೂಲಕ ಗ್ರಾಮೀಣ ಭಾಗದಲ್ಲಿ ಅನೇಕ ಜನೋಪಯೋಗಿ, ಆರೋಗ್ಯ, ನೇತ್ರಾ ತಪಾಸಣೆ ಶಿಬಿರಗಳ ಆಯೋಜನೆ, ಬಂಜೆತನ ನಿವಾರಣೆ ಜಾಗೃತಿ ಶಿಬಿರ, ಸ್ತ್ರೀ ಶಕ್ತಿ ಗುಂಪುಗಳಿಗೆ ತರಬೇತಿ ಹಾಗೂ ಉತ್ತೇಜನ ಕಾರ್ಯಕ್ರಮಗಳ ಆಯೋಜನೆ, ಸಾವಿರಾರು ಅರ್ಹ ಫಲಾನುಭವಿಗಳಿಗೆ ಕನ್ನಡಕ ಹಾಗೂ ಔಷಧ ವಿತರಣೆ, ನೇತ್ರ ಹಾಗೂ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಕೊಡಿಸುವ ಸಾರ್ಥಕ ಸೇವೆಯನ್ನು ಕೈಗೊಳ್ಳುತ್ತಾ ಬಂದಿದ್ದಾರೆ.

ಗ್ರಾಮೀಣ ಭಾಗದ ನಾಟಿ ವೈದ್ಯ ಸೇವೆ :ತಮ್ಮ ಅತ್ತೆಯಿಂದ ಬಳುವಳಿಯಾಗಿ ಬಂದ ನಾಟಿ ವೈದ್ಯಕೀಯ ಸೇವೆ (ವಿಶೇಷವಾಗಿ ಸಂತಾನ ಪ್ರಾಪ್ತಿಗಾಗಿ) ಸಲ್ಲಿಸುತ್ತಿರುವ ಕೆ.ಟಿ.ಲಕ್ಷ್ಮಮ್ಮ ಅವರು ನಾಟಿ ವೈದ್ಯದಲ್ಲಿ ಐದು ತಲೆಮಾರುಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇದುವರೆಗೂ ಸಾವಿರಾರು ಜೋಡಿ ಸಂತಾನ ಹೀನ ದಂಪತಿಗಳಿಗೆ ನಾಟಿ ಔಷಧ ನೀಡಿರುವ ಕೆ.ಟಿ.ಲಕ್ಷ್ಮಮ್ಮ ಅವರು, ಅದರಲ್ಲಿ ಶೇಕಡ ಐವತ್ತಕ್ಕೂ ‌ಹೆಚ್ಚು ಜೋಡಿಗೆ ಸಂತಾನ ಪ್ರಾಪ್ತಿಯಾಗುವ ರೀತಿಯಲ್ಲಿ ಚಿಕಿತ್ಸೆ ನೀಡಿರುವುದು ಹಾಗೂ ಅದು ಫಲಪ್ರದವಾಗಿರುವುದು ವಿಶೇಷವಾಗಿದೆ.

ವೈದ್ಯಕೀಯ ಲೋಕವೇ ಕೈಚೆಲ್ಲಿದ, ಥೈರಾಯಿಡ್ ಸೇರಿ ಇತರ ಕಾಯಿಲೆಗಳಿಂದ ಬಳಲುತ್ತಿರುವ ಅನೇಕ ಮಹಿಳೆಯರು ಇವರ ನಾಟಿ ಔಷಧ ಪಡೆದ ಮೇಲೆ ಗರ್ಭ ಧರಿಸಿರುವುದು ವೈದ್ಯಕೀಯ ಲೋಕಕ್ಕೇ ಅಚ್ಚರಿ ಎನಿಸಿದೆ. ಕೆ.ಟಿ.ಲಕ್ಷ್ಮಮ್ಮ ಅವರ ನಾಟಿ ವೈದ್ಯಕೀಯ ಸೇವೆಯ ಬಗ್ಗೆ ಇತ್ತೀಚಿಗೆ ಈಟಿವಿ ಭಾರತ್ ನಲ್ಲಿ ಕೂಡ ಬೆಳಕು ಚೆಲ್ಲಿತ್ತು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷ್ಮಮ್ಮ ಅವರ ಸೇವಾಕಾರ್ಯದ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಹಿನ್ನಲೆ ಸ್ವತಃ ಲಕ್ಷ್ಮಮ್ಮ ರವರೇ ಈ ಟಿವಿ ಭಾರತ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇತರ ಕಾರ್ಯ ಚಟುವಟಿಕೆ :ರೈತ ಮಹಿಳೆಯಾಗಿ, ರೈತ ಮಹಿಳೆಯರ ಹಾಗೂ ಕೃಷಿಕರ ಪರವಾದ ಹೋರಾಟಗಳು, ಆರೋಗ್ಯ ಸಂಬಂಧಿ ಜನ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ, ಸಹಕಾರ ಸಂಘದ ಕಾರ್ಯದರ್ಶಿಯಾಗಿ ಆಕಾಶವಾಣಿ ಬೆಂಗಳೂರು ಕೇಂದ್ರದ ಕೃಷಿ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರೈತರಿಗೆ ಸಲಹೆ ಕೊಡುವುದರ ಜೊತೆಗೆ, ಕೃಷಿ ಹಾಗೂ ಹೈನುಗಾರಿಕೆಯಲ್ಲಿನ ಸ್ವತಃ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ರೈತಸ್ನೇಹಿ ಮನೋಭಾವ ರೂಢಿಸಿಕೊಂಡಿರುವುದು ಇವರ ಹೆಗ್ಗಳಿಕೆ.

ಪ್ರಶಸ್ತಿ-ಪುರಸ್ಕಾರಗಳು ವಿವರ:ನಾಟಿ ವೈದ್ಯರಾಗಿ ಹೆಸರುವಾಸಿಯಾಗಿರುವ ಹಾಗೂ ಹೋರಾಟದ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀಮತಿ ಕೆ.ಟಿ.ಲಕ್ಷ್ಮಮ್ಮ ಅವರನ್ನು ಅನೇಕ ಸನ್ಮಾನ, ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕೊಡಮಾಡುವ 2021ರ ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ, 2020-21ನೇ ಸಾಲಿನ ಚನ್ನಪಟ್ಟಣ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ವಿವೇಕ ಜಾಗೃತಿ ಪ್ರಶಸ್ತಿ ಹಾಗೂ ಗಾ‌ನಸುಧೆ ಚಾರಿಟಬಲ್ ಟ್ರಸ್ಟ್ ಕೊಡ ಮಾಡುವ ‘ಸಮಾಜ ಸೇವಾ ರತ್ನ’ ಪ್ರಶಸ್ತಿಗಳು ಮುಂತಾದ ಪ್ರಶಸ್ತಿಗಳು ಇವರಿಗೆ ಲಭಿಸಿದೆ.

ಒಟ್ಟಾರೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಾಧಕರ ಸಾಲಿನ ಮಹಿಳೆಯರ ಪಟ್ಟಿಯಲ್ಲಿ ಕೆ.ಟಿ.ಲಕ್ಷ್ಮಮ್ಮ ರವರ ಹೆಸರು ಬರಲಿ ಎಂಬುದು ನಮ್ಮ ಆಶಯ.

ಓದಿ :ಸಿಎಎ ಕಾಯ್ದೆ: ಇನ್ನೂ ಸಿದ್ಧವಾಗದ ನಿಯಮಗಳು!

Last Updated : Mar 8, 2022, 3:49 PM IST

ABOUT THE AUTHOR

...view details