ಕರ್ನಾಟಕ

karnataka

ETV Bharat / state

ನಮ್ಮಲ್ಲಿ 10 ಜನ ಟ್ರಬಲ್ ಕಿಲ್ಲರ್ಸ್​ ಇದ್ದಾರೆ: ಮಾಜಿ ಸಚಿವ ನಾಯ್ಡು ಕಿಡಿ - ಟ್ರಬಲ್ ಕಿಲ್ಲರ್ಸ್​

ಕಾನೂನು ಹೋರಾಟದ ಮೂಲಕ ಸಿಎಂ ಪ್ರಮಾಣ ವಚನ ಸ್ವೀಕಾರವನ್ನು ದೋಸ್ತಿಗಳು ಪ್ರಶ್ನಿಸಲಿ. ಅದನ್ನು ಬಿಟ್ಟು ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದುದಿಲ್ಲ ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಕುಟುಕಿದ್ದಾರೆ.

ಮಾಜಿ ಸಚಿವ  ಕಟ್ಟಾ ಸುಬ್ರಮಣ್ಯಂ ನಾಯ್ಡು

By

Published : Jul 28, 2019, 6:44 PM IST

ರಾಮನಗರ:ಕಾಂಗ್ರೆಸಿಗರ ಬಳಿ ಒಬ್ಬ ಟ್ರಬಲ್ ಶೂಟರ್ ಇದ್ದರೆ, ನಮ್ಮ ಬಳಿ ಹತ್ತು ಜನ ಟ್ರಬಲ್ ಕಿಲ್ಲರ್ಸ್​ಗಳಿದ್ದಾರೆ ಎಂದು ಬಿಜೆಪಿಯ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಆಕ್ರೋಶದಿಂದಲೇ ಹೇಳಿದ್ರು.

ಮಾಜಿ ಸಚಿವ ಕಟ್ಟಾ ಸುಬ್ರಮಣ್ಯಂ ನಾಯ್ಡು

ಮಾಗಡಿಯ‌ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಕೆಲವರಿಗೆ ಅಜೀರ್ಣ, ಅಸಂತೃಪ್ತಿ‌ ಹೆಚ್ಚಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಅಲ್ಲಿನ ಉಸಿರುಗಟ್ಟುವ ವಾತಾವರಣದಿಂದಾಗಿ ಪಕ್ಷ ಬಿಟ್ಟು ಹೊರ ಬಂದಿದ್ದಾರೆ. ಅಲ್ಲಿಯೇ ಇದ್ದಾಗ ಅವರು ಭ್ರಷ್ಟರಾಗಿರಲಿಲ್ಲ. ಪಕ್ಷ ಬಿಟ್ಟಿದ್ದಕ್ಕೆ ಅತೃಪ್ತ ಶಾಸಕರ ಮೇಲೆ ಟೀಕೆಗಳು ಕೇಳಿ ಬರುತ್ತಿವೆ ಎಂದು ನೇರವಾಗಿ ದೋಸ್ತಿ ಸರ್ಕಾರದ ಮೇಲೆ ಹರಿಹಾಯ್ದರು.

ಅತೃಪ್ತ ಶಾಸಕರು ನಮ್ಮನ್ನು ತಿಂದುಬಿಡುತ್ತಾರೆ ಎಂದು ದೋಸ್ತಿಗಳು ಹೇಳಿದ್ದಾರೆ‌. ನಾವೇನು ಬಿರಿಯಾನಿಯೇ ತಿಂದು ಬಿಡೋಕೆ ಎಂದು ನಗೆ ಚಟಾಕೆ ಹಾರಿಸಿದರು. ಸಿದ್ದರಾಮಯ್ಯ ಸುಳ್ಳಿನ ಸೌಧ ಕಟ್ಟುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಗುಂಡೂರಾವ್ ಇಬ್ಬರಿಂದಲೇ ಕಾಂಗ್ರೆಸ್ ಸರ್ವನಾಶವಾಗಿದೆ ಎಂದು ಕೆಂಡಕಾರಿದರು.

ಯಡಿಯೂರಪ್ಪ ಸಿಎಂ ಪ್ರಮಾಣ ಮಾಡಿದ್ದು ಅಸಂಬದ್ದ ಎನ್ನುವವರು ಸುಪ್ರೀಂಕೋರ್ಟ್​ಗೆ ಹೋಗಿ ಕಾನೂನು ರೀತಿ ಹೋರಾಟ ಮಾಡಲಿ, ಅದನ್ನು ಬಿಟ್ಟು ಬರೀ ಮಾತನಾಡುವುದು ಶೋಭೆಯಲ್ಲ ಎಂದರು.

ABOUT THE AUTHOR

...view details