ರಾಮನಗರ: ಮಾಗಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಮಾಗಡಿ ತಾಲೂಕಿನ ಬ್ಯಾಲಕೆರೆ ಗ್ರಾಮದ ನಿವಾಸಿ ಮೋಹನ್ (24) ಹಾಗೂ ದಾಸೇಗೌಡನಪಾಳ್ಯ ಗ್ರಾಮದ ಪುಷ್ಪಲತಾ (24) ಮೃತ ದುರ್ದೈವಿಗಳಾಗಿದ್ದಾರೆ
ಟ್ರ್ಯಾಕ್ಟರ್ ಚಾಲಕನಾಗಿರೋ ಮೋಹನ್‌ಗೆ ಈಗಾಗಲೇ ಮದುವೆಯಾಗಿ ಒಂದು ಮಗು ಸಹ ಇದೆ. ಪುಷ್ಪಲತಾ ಅವರು ಕುಣಿಗಲ್ ತಾಲೂಕಿನ ಆಲಗೆರೆ ಗ್ರಾಮದ ಯುವಕನ ಜೊತೆ ವಿವಾಹವಾಗಿ ಆಕೆಗೂ ಕೂಡ ಮಗುವಿದೆ. ವಾರದ ಹಿಂದಷ್ಟೇ ಪುಷ್ಪಲತಾ ತಾಯಿ ಮನೆ ದಾಸೇಗೌಡನಪಾಳ್ಯಕ್ಕೆ ಬಂದಿದ್ದರು.